ಶಿಕ್ಷಕರಿಗೊಂದು ಸಲಾಂ…

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

✍️ ಹೇಮಚಂದ್ರ ಕನಕಮಜಲು

ಗುರು ತಂದೆ ತಾಯಿಯ ಅನಂತರದ ಸ್ಥಾನದಲ್ಲಿರುವವರು. ತಂದೆ ತಾಯಿಗೆ ಕೊಡುವ ಸಮಾನ ಗೌರವ ಇವರಿಗೆ ಸಲ್ಲುತ್ತದೆ. ತಿದ್ದಿ ಬುದ್ದಿ ಹೇಳಿ ಮಾರ್ಗದರ್ಶನ ಮಾಡಿ ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸುವವರು ನಮ್ಮನ್ನು ಬಾಲವಾಡಿಯಿಂದ ಓದುವ ತರಗತಿವರೆಗೆ ಓದಿಸಿದ ಎಲ್ಲಾ ನಮ್ಮ ಗುರುಗಳನ್ನು ನೆನಯಬೇಕು . ಓದಲು ಬರೆಯಲು ಕಲಿಸಿದ ನಮ್ಮ ಎಲ್ಲ ಶಿಕ್ಷಕರ ನಾವು ಸ್ಮರಿಸಲೇಬೇಕು.
ಶಿಕ್ಷಕರೆಂದರೆ ಕೇವಲ ಪಾಠ ಮಾಡಿ ತರಗತಿಯ ಸಿಲಬಸ್ ಮುಗಿಸಿ ಹೋಗುವವರಲ್ಲ ವಿದ್ಯಾರ್ಥಿಗಳ ಹೃದಯ ಮಿಡಿತದ ಅರಿವಿರಬೇಕು, ಅಂತ ಕರಣದ ಅರಿವಿರಬೇಕು, ಮಾನವೀಯ ಗುಣಗಳನ್ನು ಅರಿತಿರಬೇಕು, ಪ್ರತಿ ವಿದ್ಯಾರ್ಥಿಗಳ ಮಾನಸಿಕ, ದೈಹಿಕ, ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳ, ಅರಿವಿರಬೇಕು ಆಗ ಮಾತ್ರ ಆತ ಶಿಕ್ಷಕನಾಗಿರುವುದಕ್ಕೂ ಸಾರ್ಥಕತೆಯ ಮನೋಭಾವ, ಆತ್ಮ ತೃಪ್ತಿಯ ಮನೋಭಾವ ಮೂಡಲು ಸಾಧ್ಯ.

ನಾನು ನನ್ನ ಪಿಯುಸಿ ವಿದ್ಯಾಭ್ಯಾಸವನ್ನು ಶ್ರೀ ಸೀತಾ ರಾಘವ ಕಾಲೇಜು ಪೆರ್ನಾಜೆ ಇಲ್ಲಿ ಪೂರೈಸಿದೆ . ನಮಗೆ ರಾಜ್ಯಶಾಸ್ತ್ರ ಉಪನ್ಯಾಸಕಿಯಾಗಿ ರೇಷ್ಮಾ ಕ್ರಾಸ್ತ ಮೇಡಂ ಇವರಾಗಿದ್ದರು. ಅವರನ್ನು ನೋಡಿ ಮೊದಲು ಏನೋ ಎಂದು ತಿಳಿದುಕೊಂಡಿದ್ದೆ. ನಂತರ ಅವರ ಜ್ಞಾನದ ಸಾಮರ್ಥ್ಯ, ಅಂತಕರಣದ ಅರಿವು ಅವರಲ್ಲಿದೆ ಎಂದು ನಂತರ ಅರಿವಾಯಿತು. ಹಾಗೆ ನಾನು ಪದವಿ ತರಗತಿಯನ್ನು ಕೊಡಿಯಲ್ ಬೈಲ್ ಇಲ್ಲಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರೈಸಿದೆ ಅಲ್ಲಿ ಕೂಡ ಅವರೇ ರಾಜ್ಯಶಾಸ್ತ್ರ ಉಪನ್ಯಾಸಕಿ ಆಗಿದ್ದರು. ನಾನು ಅವರಲ್ಲಿ ನನ್ನ ಆರ್ಥಿಕ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದೆ . ಬಸ್ ಪಾಸ್ಗೆ ಹಣದ ಸಮಸ್ಯೆ ಎದುರಾದಾಗ ಮೇಡಂನಲ್ಲಿ ಹೇಳಿದಾಗ ಅವರು ಕಾಲೇಜಿನ ಪಿಡಿ ಸರ್ ಸತೀಶ್ ಇವರಲ್ಲಿ ಮಾತನಾಡಿ ಬಸ್ ಪಾಸಿಗೆ ಬೇಕಾದ ನೆರವನ್ನು ನೀಡಿದರು. ಹಾಗೆ ನಾನು ಪದವಿ ನಂತರ ಏನು ಮಾಡಬೇಕು ಎಂಬ ಗೊಂದಲದಲ್ಲಿದೆ ಆಗ ಮೇಡಂ ನನ್ನ ಆರ್ಥಿಕ ಸಮಸ್ಯೆ ಬಗ್ಗೆ ತಿಳಿದುಕೊಂಡು ಕಂಪ್ಯೂಟರ್ ಎಜುಕೇಶನನ್ನು ಪೂರೈಸಿ ಎಂದು ಪದೇ ಪದೇ ಹೇಳುತ್ತಿದ್ದರು. ನಾನು ಹಾಗೆ ಮಾಡಿದೆ .ಈಗ ನಾನು ಪದವಿ ಮುಗಿಸಿ ಕಂಪ್ಯೂಟರ್ ಜ್ಞಾನದೊಂದಿಗೆ ಉತ್ತಮ ಹುದ್ದೆಯಲ್ಲಿದ್ದೇನೆ . ಇದಕ್ಕೆ ಮೇಡಂ ನೀಡಿದ ಮಾರ್ಗದರ್ಶನವೇ ಇದು ನನ್ನ ಜೀವನಕ್ಕೆ ಒಂದು ದಾರಿಯಾಗಿದೆ .

ಹಾಗೆ ನಮ್ಮ ಕಾಲೇಜಿನಲ್ಲಿ ರಾಜಶಾಸ್ತ್ರದ ಮುಖ್ಯಸ್ಥರಾಗಿ ರಾಜ್ಯಶಾಸ್ತ್ರ ಉಪನ್ಯಾಸಕಿ ಡಾ||ಜಯಶ್ರೀ ಮೇಡಂ ರವರು. ಕಾಲೇಜಿನ ಒಬ್ಬ ವಿದ್ಯಾರ್ಥಿ ಪ್ರತಿದಿನ ಹಸಿವಿನಲ್ಲಿಯೇ ಇರುತ್ತಿದ್ದ ಮನೆಯಿಂದ ಊಟ ತರಲು ಕೂಡ ಅವನಿಗೆ ಆಗುತ್ತಿರಲಿಲ್ಲ ಸಮಸ್ಯೆಗಳಿತ್ತು. ಮಧ್ಯಾಹ್ನದ ಪ್ರತಿದಿನ ಹಸಿವಿನಿಂದಲೇ ಇರುತ್ತಿದ್ದ ಇದನ್ನು ಗಮನಿಸಿದಾಗ ಮೇಡಂ ಪ್ರತಿದಿನ ಮಧ್ಯಾಹ್ನಕ್ಕೆ ಊಟಕ್ಕೆ ಹಣ ನೀಡುತ್ತಿದ್ದರು. ಅಕಸ್ಮಾತ್ ಆತ ಹಣ ಕೇಳಲು ಬರದೇ ಇದ್ದರೆ ಅವರೇ ಸ್ವತಹ ಹೋಗಿ ಇಲ್ಲದಿದ್ದರೆ ಅವನನ್ನು ಬರಲಿಕ್ಕೆ ಹೇಳಿ
ಹಣವನ್ನು ನೀಡಿ ಊಟ ಮಾಡುವಂತೆ ಮಾಡುತ್ತಿದ್ದರು.

ಶಿಕ್ಷಕರೆಂದರೆ ಕೇವಲ ಪಠ್ಯಕ್ರಮಕ್ಕೆ ಮಾತ್ರ ಸೀಮಿತವಲ್ಲ. ವಿದ್ಯಾರ್ಥಿಗಳ ನಾಡಿಮಿಡಿತದ ಅರಿವಿರಬೇಕು. ಜ್ಞಾನ ಜೊತೆಗೆ ಮಾನವೀಯ ಗುಣಗಳ ಅಂತ ಕರಣವಿರಬೇಕು. ನಾನು ನೋಡಿದ ಶಿಕ್ಷಕರಲ್ಲಿ ಅದನ್ನು ಗಮನಿಸಿದ್ದೇನೆ. ಪ್ರಸ್ತುತ ಇಂತಹ ಶಿಕ್ಷಕರು ಕೂಡ ನಮ್ಮ ನಡುವೆ ಇದ್ದಾರೆ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನಾಗಿ ಪ್ರತಿ ವರ್ಷ ಆಚರಿಸುತ್ತಿದ್ದೇವೆ. ಈ ಶುಭ ಸಂದರ್ಭದಲ್ಲಿ ಎಲ್ಲಾ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಅನ್ನು ಕೋರುತ್ತೇನೆ.

*ಹೇಮಚಂದ್ರ ಕನಕಮಜಲು*

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.