ಸಂತೋಷ್ ಕೊಡೆಂಕಿರಿ ನಿರ್ದೇಶನದ ಪ್ರೊಡಕ್ಷನ್ ನಂ.2 ಚಲನಚಿತ್ರದ ಚಿತ್ರೀಕರಣ ಆರಂಭ

0

ಚಲನಚಿತ್ರ ರಂಗದಲ್ಲಿ ವಿಶಿಷ್ಟ ಪ್ರಯತ್ನಗಳ ಮೂಲಕ ಛಾಪು ಮೂಡಿಸುತ್ತಿರುವ ಭರವಸೆಯ ಯುವ ನಿರ್ದೇಶಕ ಸುಳ್ಯದ ಸಂತೋಷ್ ಕೊಡೆಂಕಿರಿಯವರ ನಿರ್ದೇಶನದ ಸಿನಿಮಾದ ಚಲನಚಿತ್ರದ ಚಿತ್ರೀಕರಣಕ್ಕೆ ಇಂದು ಬೆಳಿಗ್ಗೆ ಸುಳ್ಯದ ಚೆನ್ನಕೇಶವ ದೇವಸ್ಥಾನದಲ್ಲಿ ಮುಹೂರ್ತ ಮಾಡಲಾಯಿತು.
ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ ರವರು ದೃಷ್ಟಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣಗೊಳ್ಳುವ ಈ ಚಿತ್ರದ ಮುಹೂರ್ತ ನೆರವೇರಿಸಿದರು. ನಟಿ ಗೀತಾ ಭಾರತಿ ಭಟ್ ಚೆನ್ನಕೇಶವ ದೇವರಿಗೆ ಕೈ ಮುಗಿದು ಪ್ರಾರ್ಥಿಸುವುದರ ಮೂಲಕ ಪ್ರಥಮ ದೃಶ್ಯದಲ್ಲಿ ನಟಿಸಿದರು.


ತೂಗುಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ರೊ.ಗಿರೀಶ್ ಭಾರಧ್ವಾಜ್, ಲಯನ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ.ಸದಾಶಿವ, ಚೆನ್ನಕೇಶವ ದೇವಳದ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ನ.ಪಂ. ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್, ಹಿರಿಯ ನಟಿ ಶ್ರೀಮತಿ ಪದ್ಮಜಾ ರಾವ್ ಮಾತನಾಡಿದರು. ಚಿತ್ರ ನಿರ್ದೇಶಕ ಸಂತೋಷ್ ಕೊಡೆಂಕಿರಿ ಸ್ವಾಗತಿಸಿ, ವಂದಿಸಿದರು.
ಸಿನಿಮಾ ಕಥೆ ಬರೆದ ಪಾವನಾ ಸಂತೋಷ್ ಕೊಡೆಂಕಿರಿ, ಸಂತೋಷ್ ಕೊಡೆಂಕಿರಿಯವರ ತಂದೆ ನಿವೃತ್ತ ಪಾಂಶುಪಾಲ ಬಾಲಕೃಷ್ಣ ಭಟ್ ಕೊಡೆಂಕಿರಿ, ಶ್ರೀಮತಿ ಬಾಲಕೃಷ್ಣ ಭಟ್ ಕೊಡೆಂಕಿರಿ, ಎನ್.ಎ.ರಾಮಚಂದ್ರ ಮೊದಲಾದ ನೂರಾರು ಗಣ್ಯರು, ಚಿತ್ರ ಕಲಾವಿದರಾದ ಸಂಪತ್ ಮೈತ್ರೇಯ, ರಘು ಪಾಂಡೇಶ್ವರ, ಖುಷಿ, ಮೊದಲಾದ ಹಲವಾರು ಮಂದಿ ಉಪಸ್ಥಿತರಿದ್ದರು.