ಶ್ರೀರಾಮ್ ಪೇಟೆ ಬಳಿ ರಾಜ್ಯ ಹೆದ್ದಾರಿ ಇಲಾಖೆ ವತಿಯಿಂದ ರಸ್ತೆಯ ಹೊಂಡಗಳಿಗೆ ತೇಪೆ ಕಾರ್ಯ

0

ಸುಳ್ಯ ಶ್ರೀರಾಮ್ ಪೇಟೆ ಬಳಿ ರಸ್ತೆಯ ಹೊಂಡವನ್ನು ದುರಸ್ತಿ ಗೊಳಿಸುವ ಕಾರ್ಯ ರಾಜ್ಯ ಹೆದ್ದಾರಿ ಇಲಾಖೆ ವತಿಯಿಂದ ನಡೆಯುತ್ತಿದ್ದು, ತಾತ್ಕಾಲಿಕವಾಗಿ ತೇಪೆ ಕಾರ್ಯ ಮಾಡಲಾಗುತ್ತಿದೆ ಎಂದು ಕಾಮಗಾರಿಯ ಗುತ್ತಿಗೆದಾರರು ಸುದ್ದಿಗೆತಿಳಿಸಿದ್ದಾರೆ. ಮಳೆಗಾಲದ ಹಿನ್ನಲೆಯಲ್ಲಿ ಇದೀಗ ನಡೆಸುತ್ತಿರುವ ತೇಪೆ ಕಾರ್ಯ ಪರಿಪೂರ್ಣವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಕಾರಣ ಡಾಮರು ಹಾಕಿದ ನಂತರ ಮಳೆ ಬಂದರೆ ಹಾಕಿದ ಡಾಮರು ಗಟ್ಟಿಯಾಗಿ ನಿಲ್ಲಲು ಸಾಧ್ಯವಿಲ್ಲ.
ಸಂಜೆಯ ತನಕ ಮಳೆ ಬಾರದಿದ್ದರೆ ಅಲ್ಪ ಮಟ್ಟಿಗೆ ಸರಿಯಾಗಬಹುದೆಂದು ಅವರು ಹೇಳಿದರು.


ಮಳೆಗಾಲ ನಿಂತ ಕೂಡಲೇ ಮತ್ತೊಮ್ಮೆ ಈ ಭಾಗದ ರಸ್ತೆ ಹೊಂಡ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತದೆ ಎಂದು ಹೇಳಿದರು.
ಒಟ್ಟಿನಲ್ಲಿ ಹಲವಾರು ದಿನಗಳಿಂದ ನಾನಾ ರೀತಿಯ ಚರ್ಚೆಗೆ ಕಾರಣವಾದ ಈ ಭಾಗದ ರಸ್ತೆಯ ಗುಂಡಿಗಳು , ಮತ್ತು ವಾಹನ ಸವಾರರ ಸಮಸ್ಯೆಗಳು ದೂರವಾಗಲಿ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
ಇದರ ಜೊತೆಯಲ್ಲಿ ಮೊಗರ್ಪಣೆ ಸೇತುವೆ ಮೇಲೆ ಉಂಟಾಗಿರುವ ಗುಂಡಿಗಳಿಗೂ ಡಾಮರೀಕರಣ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.