ಸೆ.6,7 ರಂದು ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ

0

ಸುಳ್ಯ ನಗರದ ಕಲ್ಲುಮುಟ್ಲು ರೇಚಕಸ್ಥಾವರದ ನೀರೆತ್ತುವ ಜಾಕ್ ವೆಲ್ ನಲ್ಲಿ ಇತ್ತೀಚಿಗಿನ ವಿಪರೀತ ಮಳೆ ಹಾಗೂ ಭೂಕುಸಿತದಿಂದ ಸಂಪಾಜೆ ಕಡೆಯಿಂದ ಭಾರಿಪ್ರಮಾಣ ದಲ್ಲಿ ಕೆಸರು ಹರಿದುಬಂದು ಹೂಳು ತುಂಬಿರುವುದರಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿರುತ್ತದೆ.

ಸದ್ರಿ ಬಾವಿಯಲ್ಲಿನ ಹೂಳೆತ್ತುವ ಕಾಮಗಾರಿಯು ಸೆಪ್ಟೆಂಬರ್ 6 ಮತ್ತು 7ರಂದು ನಡೆಯಲಿದ್ದು ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.