ಸೆ.6-10: ಅರಂತೋಡು ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದಲ್ಲಿ ಆಯುಷ್ಮಾನ್ ಆಭಾ ಕಾರ್ಡ್ ಉಚಿತ ನೋಂದಣಿ ಕಾರ್ಯಕ್ರಮ

0

ಭಾರತ ಸರ್ಕಾರದ ಹೊಸ ಆಯುಷ್ಮಾನ್ ಆಭಾ ಕಾರ್ಡಿನ ಉಚಿತ ನೋಂದಣಿ ಕಾರ್ಯಕ್ರಮವು ಸೆ.6 ರಿಂದ 10 ರ ಅರಂತೋಡು ಬ್ಯಾಂಕ್ ಆಫ್ ಬರೋಡದ ಬಳಿ ಇರುವ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದಲ್ಲಿ ನಡೆಯಲಿದೆ.

ಏನಿದು ಯೋಜನೆ?
ಪ್ರಧಾನಮಂತ್ರಿ ಡಿಜಿಟಲ್‌ ಆರೋಗ್ಯ ಮಿಷನ್‌ ಯೋಜನೆಯಡಿ (ಎನ್‌ಡಿಎಚ್‌ಎಂ) ದೇಶದ ಪ್ರತಿಯೊಬ್ಬರಿಗೂ ಆಧಾರ್‌(Aadhar) ಮತ್ತು ಮೊಬೈಲ್‌ ಸಂಖ್ಯೆ ರೀತಿ ವಿಶೇಷ ಗುರುತಿನ ಸಂಖ್ಯೆ ಮತ್ತು ಕಾರ್ಡ್‌ ವಿತರಿಸಲಾಗುತ್ತದೆ. ಈ ಗುರುತಿನ ಚೀಟಿಯು ವ್ಯಕ್ತಿಯೊಬ್ಬರ ಆರೋಗ್ಯ ಕುರಿತಾದ ಎಲ್ಲಾ ಮಾಹಿತಿಯನ್ನು ಒಳಗೊಂಡಿರಲಿದೆ. ಅಂದರೆ ಕಾರ್ಡ್‌ ವಿತರಿಸಿದ ಬಳಿಕ ಆ ವ್ಯಕ್ತಿ ದೇಶದ ಯಾವುದೇ ವೈದ್ಯರನ್ನು ಭೇಟಿ ಮಾಡಿದ ವಿಷಯ, ಅವರು ಆತನಿಗೆ ನೀಡಿದ ಚಿಕಿತ್ಸೆ, ವೈದ್ಯಕೀಯ ವರದಿಗಳು, ಕಾಯಿಲೆಗಳು ಸೇರಿದಂತೆ ಆತನ ಎಲ್ಲಾ ಆರೋಗ್ಯದ ಮಾಹಿತಿ ಒಳಗೊಂಡಿರುತ್ತದೆ.

ಏನಿದರ ಉಪಯೋಗ?

ಡಿಜಿಟಲ್‌ ಆರೋಗ್ಯ ಕಾರ್ಡಲ್ಲಿ(Digital Health card) ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ದಾಖಲಿಸಲಾಗುತ್ತದೆ. ರೋಗಿಯ ಈ ಆರೋಗ್ಯ ಗುರುತಿನ ಚೀಟಿಯನ್ನು ನೋಡಿದರೆ, ವೈದ್ಯರು ಆರೋಗ್ಯ ಪರಿಸ್ಥಿತಿಯನ್ನು ತಿಳಿದುಕೊಳ್ಳಬಹುದು. ಜೊತೆಗೆ ಹೆಚ್ಚಿನ ಚಿಕಿತ್ಸೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಈ ಕಾರ್ಡ್‌ ಮೂಲಕ ರೋಗಿಗಳು ಆಯುಷ್ಮಾನ್‌ ಭಾರತ್‌ ಯೋಜನೆಯಂತಹ ಸರ್ಕಾರಿ ಯೋಜನೆಗಳಿಂದ ಪ್ರಯೋಜನಗಳನ್ನು ಪಡೆಯಲೂ ಸಾಧ್ಯವಾಗಲಿದೆ. ಆಭಾ ಕಾರ್ಡ್ ಮಾಡಿಸಿದರು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಎ.ಪಿ. ಎಲ್ ಪಡಿತರದಾರರು 1.50 ಲಕ್ಷ ಹಾಗೂ ಬಿ.ಪಿ.ಎಲ್ ಪಡಿತರದಾರರು‌ 5 ಲಕ್ಷ ವರೆಗೆ ಚಿಕಿತ್ಸೆ ಪಡೆಯಬಹುದು. ಈ‌ ಕಾರ್ಡ್ ಗೆ ವಯಸ್ಸಿನ ಮಿತಿ‌ ಇರುವುದಿಲ್ಲ. ಪಡಿತರ ಚೀಟಿಯಲ್ಲಿ ಹೆಸರು ಇರುವ ಪ್ರತಿಯೊಬ್ಬ ನಾಗರಿಕನೂ ನೋಂದಣಿ ಮಾಡಬಹುದು.

ಬೇಕಾಗುವ ದಾಖಲೆಗಳು

1.ಆಧಾರ್ ಕಾರ್ಡ್ ಮತ್ತು ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ (ಮೊಬೈಲ್ ಸಂಖ್ಯೆ ಲಿಂಕ್ ಆಗದಿದ್ದರೆ ತಂಬ್(ಬೆರಳಚ್ಚು) ಮೂಲಕ ಮಾಡಲಾಗುತ್ತದೆ)
2. ರೇಶನ್ ಕಾರ್ಡ್