ಅಂಜಲಿ ಮಾಂಟೇಸರಿ ಸ್ಕೂಲಿನಲ್ಲಿ ಶಿಕ್ಷಕರ ದಿನಾಚರಣೆ

0

ಸೆ.5 ರಂದು ಅಂಜಲಿ ಮಾಂಟೇಸರಿ ಸ್ಕೂಲಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ಹೆಚ್ಚಿನ ವಿಜೃಂಭಣೆಯಿಂದ ಆಚರಿಸಲಾಯಿತು.  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕರಾದ ರುಕ್ಮಿಣಿ ಬಿ.ಸಿ.ಅವರು ಉಪಸ್ಥಿತರಿದ್ದರು. ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಸಂಸ್ಥೆಯ ಪೋಷಕರು ಹಾಗೂ ಮಕ್ಕಳು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ರೇಷ್ಮಾ, ಪ್ರಾರ್ಥನೆಯನ್ನು ಶ್ರೀಮತಿ ಅರ್ಚನಾ, ಸ್ವಾಗತವನ್ನು ಶ್ರೀಮತಿ ಚೈತ್ರ ಹಾಗೂ ವಂದನಾರ್ಪಣೆಯನ್ನು ಡಾಕ್ಟರ್ ಪೂನಂ ಅವರು ನಡೆಸಿಕೊಟ್ಟರು.

ಸಂಸ್ಥೆಯ ಪುಟಾಣಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶುಭಕರ ಬಿ.ಸಿ, ಸಂಚಾಲಕರಾದ ಶ್ರೀಮತಿ ಗೀತಾಂಜಲಿ ಟಿ.ಜಿ., ನಿವೃತ್ತ ಶಿಕ್ಷಕರಾದ ಶ್ರೀಮತಿ ಅನುಸೂಯ, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು. ಪೋಷಕರು ಸಂಸ್ಥೆಗೆ ಶಿಕ್ಷಕರ ದಿನಾಚರಣೆಯ ಅಂಗವಾಗಿ ಆಟಿಕೆಗಳನ್ನು ನೀಡಿ ಗೌರವಿಸಿದರು.