ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರುಗಳೆಡೆಗೆ ನಮ್ಮ ನಡೆ ಕಾರ್ಯಕ್ರಮ

0

ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಚಂದ್ರ ಗೌಡ ದಂಪತಿಗಳಿಗೆ ಸನ್ಮಾನ


ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸುಳ್ಯದ ಕೆಲವು ಹಿರಿಯ ವಿದ್ಯಾರ್ಥಿಗಳು ಸೇರಿಕೊಂಡು ಗುರುಗಳೆಡೆಗೆ ನಮ್ಮ ನಡೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಆ ಪ್ರಯುಕ್ತ ಸೆ. 5 ರಂದು ಸಂಜೆ ನಿವೃತ್ತ ಪ್ರಾಂಶುಪಾಲ, ಶಿಕ್ಷಣ ತಜ್ಞ ಪ್ರೊಫೆಸರ್ ಬಾಲಚಂದ್ರ ಗೌಡ ಮತ್ತು ಸುಳ್ಯ ಶಾರದಾ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ಕಮಲ ಬಾಲಚಂದ್ರ ರನ್ನು ಸನ್ಮಾನಿಸಲಾಯಿತು.

ಹಿರಿಯ ವಿದ್ಯಾರ್ಥಿಗಳಾದ ಎಸ್.ಆರ್. ಸೂರಯ್ಯ ಸೂಂತೋಡು, ಎಸ್ ಸಂಶುದ್ದೀನ್, ಪಿ.ಎ. ಮಹಮದ್, ಯತಿರಾಜ್ ಭೂತಕಲ್ಲು, ಕಾರ್ಯಕ್ರಮದ ಸಂಚಾಲಕರುಗಳಾದ ಚಂದ್ರಶೇಖರ ಪೇರಾಲು, ದಿನೇಶ್ ಮಡಪ್ಪಾಡಿ, ಶ್ರೀಮತಿ ಮಧುರ ಎಂ.ಆರ್., ಚಿದಾನಂದ ಕೇನಾಜೆ ಯವರು ತಂಡದಲ್ಲಿದ್ದರು.