ಗಾಂಧಿನಗರ : ಎಸ್ ವೈ ಎಸ್ ಮತ್ತು ಎಸ್ ಎಸ್ ಎಫ್ ವತಿಯಿಂದ ಮಾಸಿಕ ಮಹಲರತುಲ್ ಬದ್ರಿಯಾ ಹಾಗೂ ಅನುಸ್ಮರಣಾ ಕಾರ್ಯಕ್ರಮ

0

ಸುಳ್ಯ ಗಾಂಧಿನಗರ ಎಸ್ ವೈ ಎಸ್ ಮತ್ತು ಎಸ್ ಎಸ್ ಎಫ್ ವತಿಯಿಂದ ಮಾಸಿಕ ಮಹಲರಾತುಲ್ ಬದ್ರಿಯಾ ಹಾಗೂ ಅಗಲಿದ ಉಲಮಾ ಉಮರಾ ನೇತಾರರ ಅನುಸ್ಮರಣಾ ಕಾರ್ಯಕ್ರಮ ಗಾಂಧಿನಗರ ಸುನ್ನಿ ಸೆಂಟರ್ ನಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಶೈಖುನಾ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ರವರ ಎರಡನೇ ವಾರ್ಷಿಕ ಅನುಸ್ಮರಣೆ ಮತ್ತು ಸಯ್ಯಿದ್ ಝೈನುಲ್ ಆಬಿದೀನ್ ಬಾಫಖಿ ತಂಙಳ್ ಕೊಯಿಲಾಂಡಿ, ಅಬ್ದುಲ್ ಲತೀಫ್ ಸಅದಿ ಪಯಸ್ವಿ ಉಸ್ತಾದ್ ಹಾಗೂ ನಮ್ಮಿಂದಗಲಿದ ಉಲಮಾ ಉಮರಾ ನೇತಾರರ ಹೆಸರಿನಲ್ಲಿ ತಹ್ಲೀಲ್ ಯಾಸೀನ್ ಪಾರಾಯಣ ಮಜ್ಲಿಸ್ ನಡೆಯಿತು.ಇದರ ನೇತೃತ್ವವನ್ನು SYS ಉಪಾಧ್ಯಕ್ಷರಾದ ನಿಝಾರ್ ಸಖಾಫಿ ಮುಡೂರು ವಹಿಸಿದ್ದರು,ಸ್ವಬಾಹುದ್ದೀನ್ ಹಿಮಮಿ ಸಖಾಫಿ ಸುಳ್ಯ ಅನುಸ್ಮರಣೆ ಬಾಷಣಗೈದರು, ಇರ್ಫಾನ್ ಸಅದಿ ಜೋಗಿ ಬೆಟ್ಟು ಬೈತ್ ಆಲಾಪಿಸಿದರು,ಬಶೀರ್ ಸಖಾಫಿ ಜಯನಗರ ದುವಾ ನೇತೃತ್ವ ವಹಿಸಿದ್ದರು.


ಮಜ್ಲಿಸ್ ನಲ್ಲಿ ಅಬ್ದುಲ್ಲಾ ಸಖಾಫಿ ಪಾರೆ,ಲತೀಫ್ ಸಖಾಫಿ ಕೆರೆಮೂಲೆ,ಖಾದರ್ ಮುಸ್ಲಿಯಾರ್ ಎಡೆಪಾಲ, ಹುಸೈನಾರ್ ಮದನಿ ಕುಂಜಿಲ, ಅಬೂಬಕ್ಕರ್ ಸಖಾಫಿ ಅಯ್ಯಂಗೇರಿ,ಹಸೈನಾರ್ ಜಯನಗರ,ಶಮೀರ್ ಮೊಗರ್ಪಣೆ,ಉನೈಸ್ ಗೊನಡ್ಕ, ಹಮೀದ್ ಬೀಜ ಕೊಚ್ಚಿ, ಸಿದ್ದೀಕ್ ಕಟ್ಟೆಕ್ಕಾರ್,ದ.ಕ ವಕ್ಫ್ ಚಯರ್ಮೇನ್ ಅಬ್ದುಲ್ ರಹ್ಮಾನ್ ಮೊಗರ್ಪಣೆ,ಹಾರಿಸ್ ಸಿ.ಎ, ಮಹಮ್ಮದ್ ಹೈಫಾ,ಆಬಿದ್ ಕಲ್ಲುಮುಟ್ಳು, ಹಮೀದ್ ಎಸ್.ಎಮ್, ಅಬ್ದುಲ್ ಗಫ್ಫಾರ್, ಇಬ್ರಾಹಿಂ ಕುಂಭಕ್ಕೋಡು,ಅಬ್ದುಲ್ ನಾಫಿ,ಬಶೀರ್ ಕಲ್ಲುಮುಟ್ಳು, ಆರಿಫ್ ಬುಶ್ರ, ಮಹಮ್ಮದ್ ಪೈಂಟರ್,ಅಶ್ರಪ್ ಝಂಝಂ, ಅಶ್ರಪ್ ಬುಶ್ರ, ಅಬೂಬಕ್ಕರ್ ಜಟ್ಟಿಪ್ಪಳ್ಳ,ಸಿದ್ದೀಕ್ ಬಿ.ಎ ಭಾಗವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸೀರಣಿ ವಿತರಣೆ ನಡೆಯಿತು.