ಉಬರಡ್ಕ ಶಾಲೆಗೆ ಸ್ಕೂಲ್ ಬ್ಯಾಗ್ ಕೊಡುಗೆ

0

ಉಬರಡ್ಕ ಸರಕಾರಿ ಹಿರಿ ಪ್ರಾಥಮಿಕ ಶಾಲೆಗೆ ರೈಟು ಲೈವ್ ಕೋಟೆ ಫೌಂಡೇಶನ್ ವತಿಯಿಂದ ಕೃಷ್ಣಕುಮಾರ್ ಕಲ್ಚಾರ್ ಮತ್ತು ಸಾಯಿ ರಂಜನ್ ಕಲ್ಚಾರ್ ರವರ ಸಹಕಾರದಿಂದ ಸ್ಕೂಲ್ ಬ್ಯಾಗನ್ನು ಕೊಡುಗೆಯಾಗಿ ನೀಡಲಾಯಿತು.


ಎಸ್.ಡಿ.ಎಂ.ಸಿ ಅಧ್ಯಕ್ಷ ಪುರುಷೋತ್ತಮ ಪಾಪುನಡ್ಕ, ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಿದರು. ಕೋಟೆ ಫೌಂಡೇಶನ್ ನ ಪ್ರತಿನಿಧಿ ಪ್ರದೀಪ್ ಹುಳಿಯಡ್ಕ , ಉಬರಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಶಾಂತ್ ಪಾನತಿಲ, ವಿಜಯಕುಮಾರ್ ಉಬರಡ್ಕ, ಶಾಲಾ ಮುಖ್ಯೋಪಾಧ್ಯಯಿನಿ ಮೀನಾಕ್ಷಿ, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.