ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದಲ್ಲಿ ಪ್ರತಿಭಾ ಪ್ರದರ್ಶನ

0
61

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ ಸುಬ್ರಹ್ಮಣ್ಯ ಮತ್ತು ಐ ಕ್ಯೂ ಎ ಸಿ ಘಟಕ ಸಹಯೋಗದಲ್ಲಿ ತರಗತಿವಾರು ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ. ಎಸ್. ಎಸ್ ಕಾಲೇಜು ಪ್ರಾಂಶುಪಾಲ ಡಾ. ದಿನೇಶ್ ಪಿ. ಟಿ. ವಹಿಸಿದರು. ನಾಟಕ ಕಲಾವಿದ ಹಾಗೂ ನಿರ್ದೇಶಕ ರಾಮಚಂದ್ರ ಡಿ. ಉದ್ಘಾಟಿಸಿದರು. ಸಾಂಸ್ಕೃತಿಕ ಸಮಿತಿಯ ಸದಸ್ಯ ಮನೋಹರ ಸ್ವಾಗತಿಸಿದರು. ಕುಮಾರಿ ವೈಷ್ಣವಿ ಹಾಗೂ ಶರಣ್ಯ ಪ್ರಾರ್ಥಿಸಿದರು. ಶ್ರೀಮತಿ ಪ್ರಮೀಳಾ ನಿರೂಪಿಸಿದರು. ಪ್ರತಿಭಾ ಪ್ರದರ್ಶನದಲ್ಲಿ ಒಟ್ಟು 10 ತರಗತಿಗಳು ಪ್ರದರ್ಶನವನ್ನು ನೀಡಿದರು.

ದುಗ್ಗಪ್ಪ ಗೌಡ, ವಿದುಷಿ ಶ್ರೀಮತಿ ಚೇತನ, ಸುದೀರ್ ಏನೆಕಲ್ಲು ತೀರ್ಪುಗಾರರಾಗಿ ಸಹಕರಿಸಿದರು. ತೃತೀಯ ಬಿ. ಕಾಂ (ಎ )ಪ್ರಥಮ ಸ್ಥಾನ, ದ್ವಿತೀಯ ಬಿ.ಎ ದ್ವಿತೀಯ ಸ್ಥಾನ, ದ್ವಿತೀಯ ಬಿಕಾಂ (ಎ )ತೃತೀಯ ಸ್ಥಾನವನ್ನು ಪಡೆದುಕೊಂಡಿತು.

LEAVE A REPLY

Please enter your comment!
Please enter your name here