ಗುತ್ತಿಗಾರಿನ ಸಮೀಕ್ಷಾರವರ ಚಿಕಿತ್ಸೆಗಾಗಿ ವೇಷ ಧರಿಸಿದ ತಂಡ

0

60,100 ಹಣ ಸಂಗ್ರಹಿಸಿ ವಿತರಣೆ ಮಾಡಿದ ನೆರಳು ಗೆಳೆಯರ ಬಳಗ ನಡುಗಲ್ಲು- ಸುಬ್ರಹ್ಮಣ್ಯ ಹಾಗೂ ಸೇವಾ ಭಾರತಿ ತಂಡ

ಗುತ್ತಿಗಾರು ಗ್ರಾಮದ ವಿಶ್ವನಾಥ ಮತ್ತು ಹೇಮಾವತಿ ದಂಪತಿಗಳ ಪುತ್ರಿ ಸಮೀಕ್ಷಾ ರವರು ಎಲುಬು ಕ್ಯಾನ್ಸರ್ ನಿಂದ ಬಳಲುತ್ತಿರುವ, ಅವರ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು ಅವಶ್ಯಕತೆಯಿದ್ದು ಅವರು ಗುಣಮುಖರಾಗಲು ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ಕಾರಣ ಹಲವಾರು ಸಂಘ ಸಂಸ್ಥೆಗಳು ಹಾಗೂ ಜನರು ಇವರಿಗೆ ಸಹಾಯಹಸ್ತ ಚಾಚಿವೆ, ಅದೇ ರೀತಿ ನೆರಳು ಗೆಳೆಯರ ಬಳಗ ನಡುಗಲ್ಲು – ಸುಬ್ರಹ್ಮಣ್ಯ ಎಂಬ ಯುವಕರ ತಂಡ ಹಾಗೂ ಸೇವಾ ಭಾರತಿ ತಂಡದ ಸದಸ್ಯರು ಸಮೀಕ್ಷಾ ರವರ ಚಿಕಿತ್ಸೆಗೆ ಒಂದು ಚಿಕ್ಕ ನೆರವನ್ನು ನೀಡುವ ಉದ್ದೇಶದಿಂದ ಸೌತ್ತಡ್ಕ, ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ಭಾಗದಲ್ಲಿ ವೇಷ ಧರಿಸಿ ಹಣ ಸಂಗ್ರಹ ಮಾಡಿ, ಸಂಗ್ರಹವಾದ 60,100 ರೂಪಾಯಿ ಸಹಾಯಧನವನ್ನು ಸೆ.05 ರಂದು ಸಮೀಕ್ಷಾರವರ ಮನೆಗೆ ತೆರಳಿ ವಿತರಣೆ ಮಾಡಿದರು.

ಸಹಾಯಧನ ಹಸ್ತಾಂತರಿಸುವ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪ್ರಸನ್ನ ದರ್ಬೆ, ಸೇವಾಭಾರತಿ ತಂಡದ ಸದಸ್ಯರು, ನೆರಳು ಗೆಳೆಯರ ಬಳಗದ ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here