ಮಳೆಗೆ ಕೊಚ್ಚಿ ಹೋದ ಕೊಚ್ಚಡ್ಕ ನಾಯರ್ ಕಲ್ಲು ಸಂಪರ್ಕ ಸೇತುವೆ

0

ಊರವರಿಂದ ಮರು ಸಂಪರ್ಕ ಕಾರ್ಯ

ಸೆ. 5ರಂದು ಸಂಜೆ ಸುರಿದ ಧಾರಾಕಾರ ಮಳೆಗೆ ಅಮರಮುಡ್ನೂರು ಗ್ರಾಮದ ಪೈಲಾರು ಬಳಿಯ ನಾಯರ್ ಕಲ್ಲು ಕೊಚ್ಚಡ್ಕ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿ ನಾಯರ್ ಕಲ್ಲು – ಕೊಚ್ಚಡ್ಕ ಸಂಪರ್ಕವೇ ಕಡಿತಗೊಂಡಿತ್ತು. ಈ ಭಾಗದ ಸುಮಾರು 25 ಮನೆಗಳಿಗಳು ದ್ವೀಪದಂತಾಗಿತ್ತು. ಸೆ. 6ರಂದು ಸ್ಥಳೀಯರು ರಸ್ತೆ ಕಡಿತಗೊಂಡಿದ್ದ ಭಾಗದಲ್ಲಿ ಕಲ್ಲು, ಮಣ್ಣು ಹಾಕಿ ಬದಲಿ ರಸ್ತೆಯನ್ನು ನಿರ್ಮಿಸಿ ತಾತ್ಕಾಲಿಕ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಅಮರ ಮುಡ್ನೂರು ಗ್ರಾಪಂ. ಸದಸ್ಯ ಕೃಷ್ಣಪ್ರಸಾದ್ ಮಾಡಬಾಕಿಲುರವರ ನೇತತ್ವದಲ್ಲಿ ನಡೆದ ಶ್ರಮದಾನದಲ್ಲಿ ಸ್ಥಳೀಯರಾದ ಜನಾರ್ದನ ಮೊಂಟಡ್ಕ, ರಾಮ್ ಪ್ರಸಾದ್ ಬಾಬ್ಲುಬೆಟ್ಟು, ಸುಂದರ ಮೂಕಮಲೆ, ವೀರಪ್ಪ ಕೆರೆಮೂಲೆ, ವಸಂತ ಮಾಡಬಾಕಿಲು, ತಿರುಮಲೇಶ್ವರ ದಂಬೆತೋಟ, ಶಿವರಾಮ ಕೆರೆಮೂಲೆ, ಯಾದವೇಂದ್ರ ಕಡಪಳ, ಚಿನ್ನಪ್ಪ ಕೆರೆಮೂಲೆ, ವಿಶ್ವನಾಥ ಮೂಕಮಲೆ, ಶಿವಪ್ರಸಾದ್ ಮೊಂಟಡ್ಕ, ಜಯಂತ ನಾಯರ್ ಕಲ್ಲು, ಬಾಲಸುಬ್ರಮಣ್ಯ ಮೊಂಟಡ್ಕ, ಕಿರಣ್ ನಾಯಾರ್ ಕಲ್ಲು, ವಿವೇಕ್ ಮಾಡಬಾಕಿಲು, ಅಜೇಯ ಮಾಡಬಾಕಿಲು, ಧನುಷ್ ಮಾಡಬಾಕಿಲು ಪಾಲ್ಗೊಂಡರು. ಸ್ಥಳೀಯ ಮನೆಯವರು ಸಾಮಾಗ್ರಿಗಳನ್ನು ನೀಡಿ ಸಹಕಾರ ನೀಡಿದರು.