ಮಳೆ ನೀರಿಗೆ ಕೊಚ್ಚಿ ಹೋದ ಪೈಲಾರು- ಜಬಳೆ ರಸ್ತೆಯ ಸೇತುವೆ

0

 

 

ತಾತ್ಕಾಲಿಕ ಅಡಿಕೆ ಮರದ
ಪಾಲ ನಿರ್ಮಿಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕ

 

ಅಮರಮುಡ್ನೂರು ಗ್ರಾಮದಪೈಲಾರು -ಜಬಳೆ ರಸ್ತೆಯ ಕೋಡ್ತುಗುಳಿ ಎಂಬಲ್ಲಿ ಸೇತುವೆ ಕೆಲಸ ಅರ್ಧದಲ್ಲಿದ್ದು ಸೆ.5 ರಂದು ಸುರಿದ ವಿಪರೀತ ಮಳೆಗೆ ಕೊಚ್ಚಿಕೊಂಡು ಹೋಗಿದ್ದು ಈ ಭಾಗದ ಜನರಿಗೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ಅನಾರೋಗ್ಯ ಸಮಸ್ಯೆ ಉಂಟಾದಲ್ಲಿ ಸುತ್ತು ಬಳಸಿ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಇದನ್ನು ಮನಗಂಡ ದೊಡ್ಡತೋಟ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಶ್ರಮದಾನದ ಮೂಲಕ ತಾತ್ಕಾಲಿಕ ಅಡಿಕೆ ಮರದ ಪಾಲ ನಿರ್ಮಿಸಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿರುತ್ತಾರೆ.


ಈ ಸಂದರ್ಭದಲ್ಲಿ ದೊಡ್ಡತೋಟ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ವೆಂಕಟ್ರಮಣ, ಸದಸ್ಯರಾದ ಪ್ರಸಾದ್ ಶೇಣಿ, ರಮೇಶ್.ಜಿ, ಪ್ರವೀಣ್.ಜಿ, ಮೋಹನ್.ಜಿ, ಶ್ರೀಧರ, ಲಕೇಶ್ ಶ್ರಮದಾನದಲ್ಲಿ ಪಾಲ್ಗೊಂಡರು.
ಪಾಲ ನಿರ್ಮಿಸಲು ಅಡಿಕೆ ಮರವನ್ನು ಮುರಳೀಧರ ಕೊಡ್ತುಗುಳಿ, ದೇವಿಪ್ರಸಾದ್ ಕೋಡ್ತುಗುಳಿ, ಕೃಷ್ಣಪ್ಪ ಗೌಡ ಕೋಡ್ತುಗುಳಿ ಯವರು ಒದಗಿಸಿಕೊಟ್ಟರಲ್ಲದೇ ಮದ್ಯಾಹ್ನ ಭೋಜನದ ವ್ಯವಸ್ಥೆ ಏರ್ಪಡಿಸಿದರು. ಸೇವಾ ಕಾರ್ಯದಲ್ಲಿ ಪೈಲಾರು ಒಕ್ಕೂಟದ ಅಧ್ಯಕ್ಷ ನಾರಾಯಣ ಕೋಡ್ತುಗುಳಿ, ಕುಶಾಲಪ್ಪ ಗೋಳಿಯಡಿ, ಕುಶಾಲಪ್ಪ ಮಾಡಬಾಕಿಲು, ಶಿವರಾಮ ಸಹಕರಿಸಿದರು.
ದೊಡ್ಡತೋಟ ವಲಯ ಮೇಲ್ವಿಚಾರಕ ಸೀತಾರಾಮ್ ಕಾನಾವು, ಸೇವಾ ಪ್ರತಿನಿಧಿ ದಿವ್ಯಾ ಉಪಸ್ಥಿತರಿದ್ದರು.