ಗುತ್ತಿಗಾರು : ಸಮೀಕ್ಷಾರವರ ಚಿಕಿತ್ಸೆಗಾಗಿ ಗುತ್ತಿಗಾರು ಸಹಕಾರಿ ಸಂಘದಿಂದ 10 ಸಾವಿರ ದೇಣಿಗೆ

0

 

ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿರು ಸಮೀಕ್ಷಾಳ ಚಿಕಿತ್ಸೆಗಾಗಿ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ರೂ.10 ಸಾವಿರ ಸಹಾಯಧನ ಇಂದು ನೀಡಲಾಯಿತು.

ಈ ಸಂದರ್ಭ ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಉಪಾಧ್ಯಕ್ಷ ಕಿಶೋರ್ ಕುಮಾರ್ ಅಂಬೆಕಲ್ಲು, ನಿರ್ದೇಶಕರುಗಳಾದ ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ನವೀನ್ ಬಾಳುಗೋಡು, ರವಿಪ್ರಕಾಶ್ ಬಳ್ಳಡ್ಕ, ಜಯಪ್ರಕಾಶ್ ಮೊಗ್ರ, ಆನಂದ ಹಲಸಿನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಎ ಕೆ ಮತ್ತಿತರರು ಉಪಸ್ಥಿತರಿದ್ದರು