ಹರಿಹರ ಪಲ್ಲತ್ತಡ್ಕ : ಹೆಣ್ಣು ಮಕ್ಕಳ ಶಿಶು ಪ್ರದರ್ಶನ, ಯೋಗದ ಅರಿವು ಕಾರ್ಯಕ್ರಮ

0

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಸುಳ್ಯ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಳ್ಯ ಮತ್ತು ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಹೆಣ್ಣು ಮಕ್ಕಳ ಶಿಶು ಪ್ರದರ್ಶನ ಹಾಗು ಯೋಗದ ಅರಿವು ಕಾರ್ಯಕ್ರಮವು ಗ್ರಾ.ಪಂ ಸದಸ್ಯೆ ಶಿಲ್ಪಾ ಕೊತ್ನಡ್ಕ ಇವರ ಅಧ್ಯಕ್ಷತೆಯಲ್ಲಿ ದಿ.7ರಂದು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪಂ ಸದಸ್ಯೆ ಪದ್ಮಾವತಿ ಕಲ್ಲೇಮಠ ಇವರು ಉದ್ಘಾಟಿಸಿದರು. ವೇದಿಕೆಯಲ್ಲಿ ಐಸಿಡಿಎಸ್ ಮೇಲ್ವಿಚಾರಕಿ ಶ್ರೀ ಮತಿ ವಿಜಯ,ಯೋಗ ಶಿಕ್ಷಕ ವಿಜಿತ್ ಬಿಳಿನೆಲೆ,ಸಿಎಚ್ ಒ.ರೇಣುಕಾ, ಪಿಡಿಒ ಮಣಿಯಾನ ಪುರುಷೋತ್ತಮ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರು,ಪೋಷಕರು, ಪುಟಾಣಿಗಳು ಹಾಜರಿದ್ದರು.