ಮರ್ಕಂಜ : ಸೇವಾಜೆಯಲ್ಲಿ ಬೈಕ್ ಕಾರು ಡಿಕ್ಕಿ

0
518

ಸಹ ಸವಾರೆಗೆ ಗಂಭೀರ ಗಾಯ

  ಬೈಕ್ ಕಾರೊಂದರ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸಹಸವಾರೆ ಮರ್ಕಂಜ ಗ್ರಾಮದ ಮಿಯೋಣಿ ರಾಮಣ್ಣ ನಾಯ್ಕರ ಪತ್ನಿ ಅನುರಾಧ ಎಂಬವರು ಗಾಯಗೊಂಡಿರುವ ಘಟನೆ ಎಲಿಮಲೆ ಅರಂತೋಡು ರಸ್ತೆಯಲ್ಲಿ ಆ.31 ರಂದು ಸಂಜೆ ಸಂಭವಿಸಿದೆ.

ಮರ್ಕಂಜದಿಂದ ಸುಳ್ಯಕ್ಕೆ ಪ್ರಯಾಣಿಸುತ್ತಿದ್ದ ಬೈಕ್(ಕೆಎ21 ವಿ 5900) ಮತ್ತು ಮಡಪ್ಪಾಡಿ ಕಡೆ ಹೋಗುತ್ತಿದ್ದ ಕಾರು(ಕೆಎ೦5 ಎನ್‌ಎ8904) ನಡುವೆ ಸೇವಾಜೆಯಲ್ಲಿ ಡಿಕ್ಕಿ ಸಂಭವಿಸಿದೆ. ಬೈಕ್ ಸವಾರ ದೀಕ್ಷಿತ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು ತೀರ್ವ ಗಾಯಗೊಂಡ ಸಹಸವಾರೆ ಅನುರಾದರವರನ್ನು ಮಂಗಳೂರು ಎಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here