ಗುತ್ತಿಗಾರು ಪದವಿ ಪೂರ್ವ ಕಾಲೇಜು : ಖೋ ಪಂದ್ಯಾಟದಲ್ಲಿ ಬಾಲಕರ ತಂಡ ದ್ವಿತೀಯ

0
191

ಪದವಿ ಪೂರ್ವ ಶಿಕ್ಷಣ ಇಲಾಖೆ ದ.ಕ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಪಂಜ, ಇವರ ಜಂಟಿ ಆಶ್ರಯದಲ್ಲಿ ಸೆ.6ರಂದು ನಡೆದ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರ ಖೋ ಪಂದ್ಯಾಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ತಂಡದಲ್ಲಿ ಲೊಕೇಶ್ ಎನ್, ಸಿಂಚನ್ ಬಿ.ಎಸ್, ರತನ್ ಪಿ.ಎಸ್, ವಿನೋದ್ ಸಿ, ಸುಪ್ರಿತ್, ಗೋಪಿ, ಕಾರ್ತಿಕ್ ಕೆ.ಎಂ, ಮಿಥುನ್ ಬಿ, ರಿತೇಶ್ ಹೆಚ್, ಶಶನ್, ಓಂಪ್ರಸಾದ್, ಮಿಥುನ್ ಡಿ.ಜಿ, ರವಿ, ನಿಕಿಲ್ ಸಿ.ಎಚ್. ಭಾಗವಹಿಸಿದ್ದರು. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ್ ಏನೆಕಲ್ಲು ತರಬೇತಿ ನೀಡಿದ್ದಾರೆ. ಇದೇ ತಂಡದಿಂದ ಲೋಕೇಶ್ ಎನ್.ಆರ್.ಬಹಾಗೂ ವಿನೋದ್ ಸಿ. ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ತಂಡದ ನಿರ್ದೇಶಕರಾಗಿ ಪ್ರಾಂಶುಪಾಲರಾದ ಚೆನ್ನಮ್ಮ ಪಿ ಮತ್ತು ದಿವ್ಯ ಎ ಹಾಗೂ ದೀಕ್ಷಾ ಯಂ.ಬಿ ವ್ಯವಸ್ಥಾಪಕರಾಗಿರುತ್ತಾರೆ.

p>

LEAVE A REPLY

Please enter your comment!
Please enter your name here