ಕಾಯರ್ತೋಡಿ ಶ್ರೀನಿಧಿ ಮಹಿಳಾ ಮಂಡಲದ ವತಿಯಿಂದ ಗಣೇಶೋತ್ಸವ ಪ್ರಯುಕ್ತ ಸ್ಪರ್ಧಾ ಕಾರ್ಯಕ್ರಮ ಹಾಗೂ ಪದಗ್ರಹಣ ಕಾರ್ಯಕ್ರ,ಮ

0
44

ಕಾಯರ್ತೋಡಿ ಶ್ರೀನಿಧಿ ಮಹಿಳಾ ಮಂಡಲದ ವತಿಯಿಂದ ಗಣೇಶೋತ್ಸವ ಪ್ರಯುಕ್ತ ಸ್ಪರ್ಧಾ ಕಾರ್ಯಕ್ರಮ ಹಾಗೂ ಪದಗ್ರಹಣ ಕಾರ್ಯಕ್ರ,ಮವು ಸೆ. ೪ರಂದು ಕಾಯರ್ತೋಡಿ ಅಂಗನವಾಡಿ ಕೇಂದ್ರದ ವಠಾರದಲ್ಲಿ ನಡೆಯಿತು. ಬೆಳಿಗ್ಗೆ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಹೇಮಾ ವೇಣುಗೋಪಾಲ್‌ರವರು ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧಾ ಕಾರ್ಯಕ್ರಮವನ್ನು ಶಶಿಧರ ಶೆಟ್ಟಿ ಪಡ್ಪು ಉದ್ಘಾಟಿಸಿದರು. ವೇದಿಕೆಯಲ್ಲಿ ಲತಾ ರಾಧಾಕೃಷ್ಣ, ಅನಿತಾ ಉಮೇಶ್, ಶ್ರೀಮತಿ ಶೃತಿ ಮಂಜುನಾಥ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೋಶಾಧಿಕಾರಿ ಸುನೀತಾ ರಾಮಚಂದ್ರ  ಪದಗ್ರಹಣ ನೆರವೇರಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನನು ಶ್ರೀಮತಿ ಶೃತಿ ಮಂಜುನಾಥ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಕ್ತೇಶ್ವರಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ನ.ಪಂ. ಸದಸ್ಯೆ ಶ್ರೀಮತಿ ಪ್ರವಿತಾ ಪ್ರಶಾಂತ್, ಸಿಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಎಸ್.ಪಿ., ಗುತ್ತಿಗೆದಾರರ ಸಂಘದ ಕೋಶಾಧಿಕಾರಿ ಮಂಜುನಾಥ ಪ್ರಭು, ಕಾಯರ್ತೋಡಿ ಮಿತ್ರ ಬಳUದ ಅಧ್ಯಕ್ಷ ಸಚಿನ್ ದೇಂಗೋಡಿ, ಗೌರವಾಧ್ಯಕ್ಷೆ ಹೇಮಾ ವೇಣುಗೋಪಾಲ್, ಮಹಿಳಾ ಮಂಡಲದ ಕಾರ್ಯದರ್ಶಿ ವನಿತಾ ಸಂತೋಷ್, ಕೋಶಾಧಿಕಾರಿ ಲತಾ ರಾಧಾಕೃಷ್ಣ ಉಪಸ್ಥಿತರಿದ್ದರು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶ್ರೀಮತಿ ಹೇಮಾ ವೇಣುಗೋಪಾಲ ಸ್ವಾಗತಿಸಿ, ಶ್ರೀಮತಿ ಲತಾ ರಾಧಾಕೃಷ್ಣ ವಂದಿಸಿದರು. ಶ್ರೀಮತಿ ಗೀತಾ ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here