ಸೆ.9 ರಿಂದ 15 ರ‌ವರೆಗೆ ಜೇಸಿಐ ಸುಳ್ಯ ಸಿಟಿ ಜೇಸಿ ಸಪ್ತಾಹ ಆಚರಣೆ

0

 

ಸುಳ್ಯ‌ ಜೇಸಿಐ ಸುಳ್ಯ ಸಿಟಿ ವತಿಯಿಂದ ಜೇಸಿ ಸಪ್ತಾಹವು ಸೆ.9 ರಿಂದ ಸೆ.15 ರ ತನಕ ನಡೆಯುವುದು.
ಸೆ.9 ರಂದು ಜೇಸಿ ಸಪ್ತಾಹದ ಉದ್ಘಾಟನೆ ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆ ಸುಳ್ಯದಲ್ಲಿ ನಡೆಯುವುದು ಎಂದು ಜೇಸಿಐ ಸಿಟಿ ಸಂಸ್ಥೆಯ ಅಧ್ಯಕ್ಷ ಬಶೀರ್ ಯು.ಪಿ. ಹೇಳಿದರು.

ವಲಯ ಉಪಾಧ್ಯಕ್ಷರಾದ ಜೇಸೀ ರವಿಚಂದ್ರ ಪಾಟಾಳಿ ಯವರು ಉದ್ಘಾಟಿಸಲಿದ್ದಾರೆ‌. ವರ್ತಕರ ಸಂಘದ ಅಧ್ಯಕ್ಷ ಸುಧಾಕರ್ ರೈಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆ ಅಧ್ಯಕ್ಷ ವಿನಯ್ ರಾಜ್ ಮಡ್ತಿಲ, ಪ್ರಾಂಶುಪಾಲೆ ಸಂಪ್ರಿತಾ, ಭಾಗವಹಿಸುವರು ಸುದ್ದಿ ಬಿಡುಗಡೆ ವರದಿಗಾರ ಶರೀಫ್ ಜಟ್ಟಿಪಳ್ಳ ರವರಿಗೆ ಪತ್ರಿಕಾ ರಂಗದಲ್ಲಿ ಮೌನ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಎರಡನೇ ದಿನ ರಕ್ತದಾನ ಶಿಬಿರ ನಡೆಯಲಿದೆ ಸಪ್ತಾಹದ ಮೂರನೇಯ ದಿನ ಶಿವಕೃಪಾ ಕಲಾಮಂದಿರ ದಲ್ಲಿ ಕ್ಯಾರಂ ಪಂದ್ಯಾಟ ನಡೆಯಲಿದೆ ನಾಲ್ಕನೇ ದಿನ ಪರಿಸರ ದಿನ ಬಳ್ಳಡ್ಕ ದಲ್ಲಿ ಗಿಡನಡುವ ಕಾರ್ಯಕ್ರಮ ಸಪ್ತಾಹದ ಐದನೇ ದಿನ ಜೇಸಿ ಅನುರಾಧ ಕುರುಂಜಿ ಯವರಿಂದ ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಮಹಿಳಾ ಅಭಿವೃದ್ಧಿ ಕೌಶಲ್ಯ ತರಬೇತಿ ಕಾರ್ಯಕ್ರಮ ನಡೆಯಲಿದೆ. ಆರನೇ ದಿನ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ದಲ್ಲಿ ವಕೀಲರ ಸಂಘ ಸುಳ್ಯ ಇದರ ಕೋಶಾಧಿಕಾರಿ ಜಗದೀಶ್ ಡಿ.ಪಿ ಯವರು ಕಾನೂನು ಮಾಹಿತಿ ನೀಡಲಿರುವರು ಹರೀಶ್ ರೈ ಉಬರಡ್ಕ ಉದ್ಘಾಟಿಸಿದರೆ ರವಿಕುಮಾರ್ ಅವರು ಅತಿಥಿ ಯಾಗಿ ಭಾಗವಹಿಸುವರು.


ಸಪ್ತಾಹದ ಕೊನಯ ದಿನವಾದ ಸೆ.15 ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ಸಂಜೆ 6:00 ಗಂಟೆಗೆ ಗ್ರಾಂಡ್ ಪರಿವಾರ್ ಸಭಾಭವನ ಪರಿವಾರಕಾನ ಸುಳ್ಯದಲ್ಲಿ ನಡೆಯಲಿರುವುದು ನಂತರ ಸಂಭ್ರಮದ ದಿನ ಈ ಕಾರ್ಯಕ್ರಮದಲ್ಲಿ ಬೆಳ್ಳಾರೆ ಯ ಯುವ ಉದ್ಯಮಿ ಮತ್ತು ಬೆಳ್ಳಾರೆ ಜೇಸಿಐ ಯ ಪೂರ್ವಾದ್ಯಕ್ಷ ಮಿಥುನ್ ಶೆಣೈ ಯವರಿಗೆ ಯೂತ್ ಇನ್ ಸ್ಪಯರ್ ಎವಾರ್ಡ್ ನೀಡಿ ಗೌರವಿಸಲಾಗುವುದು ಅಭಿನಂದನಾ ಭಾಷಣ ಗಾರರಾಗಿ ಜೇಸಿಐ ಬೆಳ್ಳಾರೆ ಯ ಪೂರ್ವಾದ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ ಭಾಗವಹಿಸುವರು ಮುಖ್ಯ ಅತಿಥಿಗಳಾಗಿ ಜೇಸಿಐ ಭಾರತದ ಕಾನೂನು ಸಂಸದೀಯ ಮಂಡಳಿ ಸದಸ್ಯೆ ಸೌಜನ್ಯ ಹೆಗ್ಡೆ, ವಲಯಾಧ್ಯಕ್ಷ ರಾಯನ್ ಉದಯ ಕ್ರಾಸ್ತಾ,ವಲಯ ಉಪಾಧ್ಯಕ್ಷ ರವಿಚಂದ್ರ ಪಾಟಾಳಿ, ಭಾಗವಹಿಸುವರು, ಘಟಕದ ಸ್ಥಾಪಕ ಮನಮೋಹನ್ ಬಳ್ಳಡ್ಕ, ಸ್ಥಾಪಕಅಧ್ಯಕ್ಷ ಶತೀಶ್ ಎಂ, ಪೂರ್ವಾದ್ಯಕ್ಷ ವಿನಯ್ ರಾಜ್ ಮಡ್ತಿಲ, ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ್ ಕನಕಮಜಲು ರವರ ಗೌರವ ಉಪಸ್ಥಿತಿಯಲ್ಲಿ ಘಟಕದ ಅಧ್ಯಕ್ಷ ಬಶೀರ್ ಯು ಪಿ ಅಧ್ಯಕ್ಷತೆ ವಹಿಸುವರು ಎಂದು ಅವರು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿನಯರಾಜ್ ಮಡ್ತಿಲ, ಮನಮೋಹನ್ ಬಳ್ಳಡ್ಕ, ಕೃತಿಕಾ ಇದ್ದರು.