ವಿದ್ಯುತ್ ಅವಘಡದಿಂದ ಬೆಳ್ಳಾರೆಯ ವ್ಯಕ್ತಿ ಕೇರಳದಲ್ಲಿ ಮೃತ್ಯು

0
1385

 

p>

ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಅವಘಡದಿಂದ ವ್ಯಕ್ತಿಯೋರ್ವರು ಕೇರಳದ ಕಂಪನಿಯೊಂದರಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತ ವ್ಯಕ್ತಿ ಸಜೀಪ ಮುನ್ನೊರು ಗ್ರಾಮದ ಮರ್ತಾಜೆ ನಿವಾಸಿ ವಿದ್ಯಾಧರ ಕುಲಾಲ್ (೩೫ವರ್ಷ) ಎಂದು ತಿಳಿದುಬಂದಿದೆ.
ವಿದ್ಯಾದರ ಅವರು ಕೇರಳದ ಖಾಸಗಿ ಎಲೆಕ್ಟ್ರಾನಿಕ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಮೂಲತಃ ಬೆಳ್ಳಾರೆ ನಿವಾಸಿಯಾಗಿರುವ ಇವರು ಇತ್ತೀಚೆಗೆ ಮುನ್ನೂರು ಗ್ರಾಮದ ಮರ್ತಾಜೆ ಎಂಬಲ್ಲಿ ಜಾಗ ಖರೀದಿ ಮಾಡಿ ಹೊಸ ಮನೆ ಕಟ್ಟಿದ್ದರು.
ಕಳೆದ ಒಂದು ವರ್ಷ ಹಿಂದೆ ವಿವಾಹವಾಗಿದ್ದ ಇವರು ಪತ್ನಿ ತುಂಬು ಗರ್ಭಿಣಿಯಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಉದ್ಯೋಗದಲ್ಲಿದ್ದಾರೆ.

LEAVE A REPLY

Please enter your comment!
Please enter your name here