ಸುಳ್ಯದಲ್ಲಿ ನಡೆಯುವ ಶಾರದಾಂಬಾ – ದಸರಾ ಉತ್ಸವದ ಪೂರ್ವಭಾವಿ ಸಭೆ

0

ಸುಳ್ಯದಲ್ಲಿ ಅ.2ರಿಂದ ಅ.10ರವರೆಗೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ವಿಜೃಂಭಣೆಯಿಂದ ನಡೆಯಲಿರುವ 51ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ ಸುಳ್ಯ ದಸರಾ ಉತ್ಸವದ ಪೂರ್ವ ತಯಾರಿಯ ಬಗ್ಗೆ ವಿಶೇಷ ಸಭೆ ಶ್ರೀರಾಂ ಪೇಟೆಯ ಕಾನತ್ತಿಲ ದೇವಮ್ಮ ಸಂಕೀರ್ಣದಲ್ಲಿ ಸೆ.7ರಂದು ನಡೆಯಿತು.
ಸಭೆಯಲ್ಲಿ ಆರ್ಥಿಕ ಕ್ರೋಡೀಕರಣ, ಚಪ್ಪರ ವ್ಯವಸ್ಥೆ, ಶೋಭಾಯಾತ್ರೆ ಮೆರವಣಿಗೆಗೆ ಟ್ಯಾಬ್ಲೋ ನಿರ್ಮಾಣ ಮತ್ತು ನಿರ್ವಹಣೆ, ಶಿಸ್ತು ಕಾಪಾಡುವ ಬಗ್ಗೆ ಮತ್ತು ಇನ್ನಿತರ ವಿಷಯಗಳ ಕುರಿತು ಚರ್ಚಿಸಲಾಯಿತು.

ದಸರಾ ಸೇವಾ ಟ್ರಸ್ಟ್ ಉಪಾಧ್ಯಕ್ಷ ನಾರಾಯಣ ಕೇಕಡ್ಕ, ಎಸ್.6 ಗೌರವಾಧ್ಯಕ್ಷ ಕೆ‌‌.ಗೋಕುಲದಾಸ್,ಅಧ್ಯಕ್ಷ ಚಿದಾನಂದ ವಿದ್ಯಾನಗರ, ಪ್ರ.ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲ್, ಗೌರವ ಸಲಹೆಗಾರ ಡಾ.ಲೀಲಾಧರ್ ಡಿ.ವಿ., ಶಾರದಾಂಬ ಸೇವಾ ಟ್ರಸ್ಟ್ ಉಪಾಧ್ಯಕ್ಷ ಬೂಡು ರಾಧಾಕೃಷ್ಣ ರೈ, ಎಸ್ 6 ಕೋಶಾಧಿಕಾರಿ ಪ್ರದೀಪ್ ಕೆ.ಎನ್. ಸಭೆಯನ್ನುದೇಶಿಸಿ ಮಾತನಾಡಿದರು.


ಅಧ್ಯಕ್ಷ ಚಿದಾನಂದ ವಿದ್ಯಾನಗರ ಸ್ವಾಗತಿಸಿ, ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲ್ ವಂದಿಸಿದರು.