ಶ್ರೀ ವಿಶ್ವಕರ್ಮ ಭಜನಾ ಮಂಡಳಿ ನಿಡ್ಮಾರು ಇದರ ವತಿಯಿಂದ 7ನೇ ವರ್ಷದ ಶಿಕ್ಷಕರ ದಿನಾಚರಣೆ

0

 

ಶ್ರೀ ವಿಶ್ವಕರ್ಮ ಭಜನಾ ಮಂಡಳಿ ನಿಡ್ಮಾರು ಇದರ ವತಿಯಿಂದ 7ನೇ ವರ್ಷದ ಶಿಕ್ಷಕರ ದಿನಾಚರಣೆಯನ್ನು ನಿವೃತ್ತ ಶಿಕ್ಷಕರಾದ ಶ್ರೀಮತಿ ಶಶಿಕಲಾ ಮತ್ತು ಬಾಸ್ಕರ ಆರ್.ಕೆ ದಂಪತಿಯನ್ನು ಬಾಳಿಲದ ಅವರ ಸ್ವಗೃಹದಲ್ಲಿ ಸನ್ಮಾನಿಸುವುದರ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಅಧ್ಯಕ್ಷ ಮಧುಚಂದ್ರ ಪಂಜ ವಹಿಸಿದ್ದರು. ಭಜನಾ ಮಂಡಳಿಯ ಗೌರವ ಸಲಹೆಗಾರರಾದ ಪಿ.ಜಿ.ಎಸ್.ಎನ್. ಪ್ರಸಾದ್ ಬಾಳಿಲ ಮತ್ತು ಜಯರಾಜ್ ಆಚಾರ್ ಕಳತ್ತಜೆ ಕಾರ್ಯಕ್ರಮದ ಬಗ್ಗೆ ಶುಭ ನುಡಿಗಳನ್ನಾಡಿದರು. ನಿವೃತ್ತ ಶಿಕ್ಷಕಿ ಶ್ರೀಮತಿ ಲೀಲಾವತಿ, ಶ್ರೀಮತಿ ಮಾಲಿನಿ ಪ್ರಸಾದ್ ಹಾಗೂ ಸನ್ಮಾನ ಸ್ವೀಕರಿಸಿದ ಶ್ರೀಮತಿ ಶಶಿಕಲಾ ಮತ್ತು ಬಾಸ್ಕರ ಆರ್.ಕೆ ದಂಪತಿಗಳು ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಭಜನಾ ಮಂಡಳಿಯ ಸಾಮಾಜಿಕ ಕಾರ್ಯಕ್ರಮದ ಬಗ್ಗೆ ಶುಭ ಹಾರಿಸಿದರು. ಈ ಸಂಧರ್ಭದಲ್ಲಿ ಭಜನಾ ಮಂಡಳಿಯ ಸದಸ್ಯರಾದ ಪುರುಷೋತ್ತಮ ಆಚಾರ್ಯ ಕುಕ್ಕಟ್ಟೆ, ಪ್ರವೀಣ ಆಚಾರ್ಯ ಕಾಣಿಯೂರು, ಶೇಷಪ್ಪ ಆಚಾರ್ಯ ನಿಡ್ಮಾರು, ರಮೇಶ ಆಚಾರ್ಯ ಕೊಲೆಂಜಿಕೊಡಿ, ಶ್ರೀಮತಿ ಆರುಣಾ ಶೇಷಪ್ಪ ಆಚಾರ್ಯ ನಿಡ್ಮಾರು ಮತ್ತು ಮನೆಯವರು ಹಾಜರಿದ್ದರು. ಭಜನಾ ಮಂಡಳಿಯ ಅಧ್ಯಕ್ಷ ಮಧುಚಂದ್ರ ಪಂಜ ಪ್ರಾಸ್ತಾವಿಕ ಮಾತನಾಡಿದರು. ಶೇಷಪ್ಪ ಆಚಾರ್ಯ ನಿಡ್ಮಾರು ಪ್ರಾರ್ಥನೆಗೈದರು, ನಾರಾಯಣ ಆಚಾರ್ಯ ಎಂ. ಆರ್. ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here