ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ನಿವೃತ್ತಿ ಹೊಂದಿದ ಎ.ಎಸ್.ಐ.ಗಳಿಗೆ

0

 

ಮತ್ತು ಪೊಲೀಸರಿಗೆ ಸನ್ಮಾನ – ಬೀಳ್ಕೊಡುಗೆ

ಒಗ್ಗಟ್ಟಾಗಿ ಪ್ರೀತಿ,ವಿಶ್ವಾಸದಿಂದ ಕೆಲಸ ಮಾಡಿ – ಡಿವೈಎಸ್ಪಿ ವೀರಯ್ಯ ಹಿರೇಮಠ್

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡವರಿಗೆ ಮತ್ತು ವರ್ಗಾವಣೆಗೊಂಡ ಪೊಲೀಸರಿಗೆ ಸನ್ಮಾನ ಮತ್ತು ಬೀಳ್ಕೊಡುಗೆ ಕಾರ್ಯಕ್ರಮವು ಸೆ.8 ರಂದು ಬೆಳ್ಳಾರೆ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.

ಪುತ್ತೂರು ಡಿವೈಎಸ್ಪಿ ವೀರಯ್ಯ ಹಿರೇಮಠ್ ಮತ್ತು ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ನವೀನಚಂದ್ರ ಜೋಗಿಯವರು ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಎ.ಎಸ್.ಐ.ಭಾಸ್ಕರ ಅಡ್ಕಾರು ಮತ್ತು ಶ್ರೀಮತಿ ವಿಜಯ ದಂಪತಿಗಳನ್ನು ಹಾಗು ನಿವೃತ್ತಿಗೊಂಡಿರುವ ಎ.ಎಸ್.ಐ. ನಾರಾಯಣ ಮತ್ತು ಶ್ರೀಮತಿ ಪ್ರಮೀಳಾ ದಂಪತಿಗಳನ್ನು ಉಂಗುರ ತೊಡಿಸಿ ,ಶಾಲು ಹೊದಿಸಿ, ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ಶುಭಹಾರೈಸಿದರು.

ವರ್ಗಾವಣೆಗೊಂಡ ಎಸ್.ಐ.ರುಕ್ಮ ನಾಯ್ಕ್, ಎ.ಎಸ್.ಐ.
ಸುಧಾಕರ, ಹೆಡ್ ಕಾನ್ಸ್ ಟೇಬಲ್ ಗಳಾದ ಬಾಲಕೃಷ್ಣ, ಮೋಹನ, ಸಂತೃಪ್ತಿ ಯವರನ್ನು ಶಾಲು,ಹೊದಿಸಿ,ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಭಾಸ್ಕರ ಅಡ್ಕಾರು ಮತ್ತು ನಾರಾಯಣರವರು ಮಾತನಾಡಿ ತಾವು ಸೇವೆ ಸಲ್ಲಿಸಿದ ದಿನಗಳನ್ನು ಸ್ಮರಿಸಿಕೊಂಡು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

 

 

ಕಡಬ ಎಸ್.ಐ.ಆಂಜನೇಯ ರೆಡ್ಡಿ, ಬೆಳ್ಳಾರೆ ಎಸ್.ಐ.ಸುಹಾಸ್ , ಎ.ಎಸ್.ಐ.ರವೀಂದ್ರ, ಕಾನ್ಸ್ ಟೇಬಲ್ ಮಂಜುನಾಥ, ಮಹಾದೇವ ಪ್ರಸಾದ್, ಪ್ರೊಬೆಷನರಿ ಎಸ್.ಐ.ಸವಿತಾ ರವರು ಶುಭಹಾರೈಸಿ ಮಾತನಾಡಿದರು.

ಎ.ಎಸ್.ಐ.ನಾರಾಯಣರವರ ಪತ್ನಿ ಶ್ರೀಮತಿ ಪ್ರಮೀಳಾರವರು ನಿವೃತ್ತಿಗೊಂಡವರಿಗೆ ಹಾಗೂ ವರ್ಗಾವಣೆಗೊಂಡ ಎಲ್ಲರಿಗೂ ಶುಭಹಾರೈಸಿ ತನ್ನ ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸುಬ್ರಹ್ಮಣ್ಯ ಠಾಣೆ ಎಸ್.ಐ.ಮಂಜುನಾಥರವರು ಉಪಸ್ಥಿತರಿದ್ದರು.
ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಹಿರಿಯ ಪ್ರಾ.ಶಾ.ವಿದ್ಯಾರ್ಥಿಗಳು ಪ್ರಾರ್ಥಿಸಿ ,ಬೆಳ್ಳಾರೆ ಕ್ರೈಂ ಎಸ್.ಐ.ಆನಂದರವರು ಪ್ರಾಸ್ತಾವಿಕ ಮಾತನಾಡಿದರು.
ಕಾನ್ಸ್ ಟೇಬಲ್ ಮೋಹನ್ ಸ್ವಾಗತಿಸಿ, ಹಾಲೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಿಬ್ಬಂದಿ ವರ್ಗದವರು ಸಹಕರಿಸಿದರು.