ಜೇಸಿಐ ಸುಳ್ಯ ಸಿಟಿ : ‘ನಮಸ್ತೆ’ ಜೇಸಿಐ ಸಪ್ತಾಹಕ್ಕೆ ಚಾಲನೆ

0

 

ಸುದ್ದಿ ಬಿಡುಗಡೆ ವರದಿಗಾರ ಶರೀಫ್ ಜಟ್ಟಿಪಳ್ಳರಿಗೆ ಮೌನ ಸಾಧಕ ಪ್ರಶಸ್ತಿ ಪ್ರದಾನ

 

 

ಜೇಸಿಐ ಸುಳ್ಯ ಸಿಟಿ ಇದರ ಆಶ್ರಯದಲ್ಲಿ ‘ನಮಸ್ತೆ’ ಜೇಸಿಐ ಸಪ್ತಾಹ ಸೆ.9ರಂದು ಉದ್ಘಾಟನೆ ಗೊಂಡಿತು.
ಜೇಸಿಐ ಸುಳ್ಯ ‌ಸಿಟಿ ಅಧ್ಯಕ್ಷ ಬಶೀರ್ ಯು.ಪಿ. ಅಧ್ಯಕ್ಷತೆ ವಹಿಸಿದ್ದರು.

ಒಂದು ವಾರಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಜೇಸಿಐ ವಲಯ 15 ರ ಉಪಾಧ್ಯಕ್ಷ ರವಿಚಂದ್ರ ಪಾಟಾಳಿ ಚಾಲನೆ ನೀಡಿದರು. ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ಸಮಾರಂಭದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆ ವರದಿಗಾರ ಶರೀಫ್ ಜಟ್ಟಿಪಳ್ಳರಿಗೆ ಮೌನ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೇಸಿಐ ಸಿಟಿ ಕಾರ್ಯದರ್ಶಿ ಶಶಿಧರ್ ಎಕ್ಕಡ್ಕ, ಮಾಜಿ ಅಧ್ಯಕ್ಷ ಚಂದ್ರಶೇಖರ ಕನಕಮಜಲು, ಮ್ಯಾಟ್ರಿಕ್ಸ್ ಸಂಸ್ಥೆ ಪ್ರಾಂಶುಪಾಲೆ ಸಂಪ್ರೀತಾ, ಮ್ಯಾಟ್ರಿಕ್ಸ್ ವಿನಯರಾಜ್ ಮಡ್ತಿಲ ವೇದಿಕೆಯಲ್ಲಿ ಇದ್ದರು.