ಪಂಜದಲ್ಲಿ ಮಹಾಲಕ್ಷ್ಮೀ ಟ್ರೇಡರ್ಸ್ ಶುಭಾರಂಭ

0

 

ಪಂಜದ ಮುಖ್ಯ ರಸ್ತೆಯ ಬಳಿಯಿರುವ ನಾರಾಯಣ ಕಾಂಪ್ಲೆಕ್ಸ್ ನ ಒಂದನೇ ಕೊಠಡಿಯಲ್ಲಿ ಸಮಾನ ಮನಸ್ಕರ ಪಾಲುದಾರಿಕೆಯೊಂದಿಗೆ “ಮಹಾಲಕ್ಷ್ಮೀ ಟ್ರೇಡರ್ಸ್’ ಅಡಿಕೆ, ಕೃಷಿ ಉತ್ಪನ್ನ, ಕಾಡು ಉತ್ಪತ್ತಿಗಳ ಖರೀದಿ ಕೇಂದ್ರವು ಸೆ.9 ರಂದು ಶುಭಾರಂಭ ಗೊಂಡಿತು.

ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ, ಜನಪ್ರಿಯ ವೈದ್ಯರಾದ ಡಾ.ರಾಮಯ್ಯ ಭಟ್ ದೀಪ ಬೆಳಗಿಸಿ ಶುಭ ಹಾರೈಸಿದರು. ಹಿರಿಯ ಪ್ರಗತಿ ಪರ ಕೃಷಿಕರಾದ ಬಿ ಎಂ ಆನಂದ ಗೌಡ ಕಂಬಳ, ಮಾಧವ ಗೌಡ ಜಾಕೆ, ಪಟೇಲ್ ಪುಟ್ಟಣ್ಣ ಗೌಡ ಎಣ್ಣೆಮಜಲು, ಕಾರ್ಯಪ್ಪ ಚಿದ್ಗಲ್ , ಲಕ್ಷ್ಮೀನಾರಾಯಣ ನಡ್ಕ, ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ,
ಉದ್ಯಮಿ ಮೋನಪ್ಪ ನಾಯ್ಕ ಸೌದಾಮಿನಿ ಗೌರವ ಉಪಸ್ಥಿತರಿದ್ದು ಶುಭ ಹಾರೈಸಿದರು. ಪಾಲುದಾರರು, ಗ್ರಾಹಕರು , ಮೊದಲಾದವರು, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲೋಕೇಶ್ ಬರೆಮೇಲು ಸ್ವಾಗತಿಸಿದರು. ಲಿಗೋಧರ ಆಚಾರ್ಯ ವಂದಿಸಿದರು.