ಐನೆಕಿದು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಭೆ

0

 

ಐನೆಕಿದು ಹಾಲು ಉತ್ಪಾದಕರ ಸಹಕಾರಿ ಸಂಘದ 2021-2

2ನೇ ಸಾಲಿನ ವಾರ್ಷಿಕ ಸಭೆಯು ಸೆ.08 ರಂದು ಅಮೃತ ಸಂಭ್ರಮ ಸಭಾಭವನ ಐನೆಕಿದು ಇಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ಅಧ್ಯಕ್ಷತೆ ವಹಿಸಿದ್ದರು.
ಸಂಘದ ಕಾರ್ಯದರ್ಶಿ ಶ್ರೀಮತಿ ಪ್ರೇಮಾ ಕೆ. ವರದಿ ವಾಚಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದ.ಕ ಹಾಲು ಒಕ್ಕೂಟ ಸುಳ್ಯ ಇದರ ವಿಸ್ತರಣಾಧಿಕಾರಿಗಳಾದ ಹರೀಶ್.ಎಂ.ಎಸ್, ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ.ಸತೀಶ್ ರಾವ್ ಇವರುಗಳು ಹೈನುಗಾರಿಕೆಯ ಬಗ್ಗೆ ಮಾಹಿತಿ ನೀಡಿದರು.


ಸಂಘದ ಉಪಾಧ್ಯಕ್ಷರಾದ ಸವಿತಾ ಉಮೇಶ್ ಕೋಡಿಯಡ್ಕ ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಹಾಲು ಸೊಸೈಟಿಯ ನಿರ್ದೇಶಕರುಗಳಾದ ಚಿದಾನಂದ ಕೋಡಿಯಡ್ಕ, ರಮೇಶ್ ಕೋನಡ್ಕ, ಅಜಿತ್ ಕುಮಾರ್ ಕೂಜುಗೋಡು, ಹರಿಪ್ರಸಾದ್ ಕೆದಿಲ, ಕಿರಣ್ ಪೈಲಾಜೆ, ರಾಮಚಂದ್ರ.ಟಿ, ಡೋಜಪ್ಪ ಪೈಲಾಜೆ, ಶಿಲ್ಪಾ ಕೋಡಿಯಡ್ಕ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರಾದ ರಮೇಶ್ ಕೋನಡ್ಕ ಸ್ವಾಗತಿಸಿ, ನವೀನ್ ಕಟ್ರಮನೆ ಧನ್ಯವಾದ ಸಮರ್ಪಿಸಿದರು.