ಅಜ್ಜಾವರದಲ್ಲಿ ಗ್ರಾಮ ಸಭೆ, ವಾರ್ಡ್ ಸಭೆ ನಡೆಸಲು ಗ್ರಾಮಸ್ಥರಿಂದ ಮನವಿ

0

 

 

ಮನವಿ ಸ್ವೀಕರಿಸಿ ಪಿಡಿಒ ಹೇಳಿದ್ದೇನು ?

ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾರ್ಡು ಸಭೆ ಮತ್ತು ಗ್ರಾಮ ಸಭೆಗಳನ್ನು ನಡೆಸಬೇಕೆಂದು ಅಜ್ಜಾವರ ಗ್ರಾಮಸ್ಥರು ಮಾಜಿ ಜಿ.ಪಂ. ಸದಸ್ಯ ನವೀನ್ ರೈ ಮೇನಾಲ ಹಾಗೂ ಗ್ರಾ.ಪಂ. ಮಾಜಿ ಅಧ್ಯಕ್ಷ ವೆಂಕಟ್ರಮಣ ಮುಳ್ಯ ಗ್ರಾ.ಪಂ. ಅಧ್ಯಕ್ಷ ಸತ್ಯವತಿ ಬಸವನಪಾದೆ ಹಾಗೂ ಪಿ.ಡಿ.ಒ. ಜಯಮಾಲ ರವರಿಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಗ್ರಾ.ಪಂ ಉಪಾಧ್ಯಕ್ಷೆ ಲೀಲಾ ಮನಮೋಹನ್ ಉಪಸ್ಥಿತರಿದ್ದರು.


ಅಜ್ಜಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಕಾರದ ಆದೇಶದಂತೆ ಈ ಬಾರಿ ಯಾವುದೇ ವಾರ್ಡ್ ಸಭೆ, ಗ್ರಾಮ ಸಭೆಗಳು ನಡೆದಿಲ್ಲ. ಇತ್ತೀಚೆಗೆ ನಿಗದಿಯಾಗಿರುವ ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳನ್ನು ಕೂಡಾ ಮುಂದೂಡಿರುವುದು ಕಂಡು ಬಂದಿದ್ದು, ಯಾವ ಕಾರಣಕ್ಕಾಗಿ ಮುಂದೂಡಲ್ಪಟ್ಟಿದೆ ಎಂದು ತಿಳಿದು ಬಂದಿಲ್ಲ. ಆದ್ದರಿಂದ ಗ್ರಾಮದ ಅಭಿವೃದ್ಧಿ ಚರ್ಚಿಸಲು ಮತ್ತು ಗ್ರಾಮಸ್ಥರ ಅಹವಾಲು ಸ್ವೀಕಾರಕ್ಕೆ ಅವಕಾಶವಿಲ್ಲದಾಗಿದೆ ಮತ್ತು ಗ್ರಾಮದ ಅಭಿವೃದ್ಧಿ ಕುಂಡಿತವಾಗಿದೆ.

 

ಹಾಗಾಗಿ ಶೀಘ್ರವಾಗಿ ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ ವಾರ್ಡು ಸಭೆ ಮತ್ತು ಗ್ರಾಮ ಸಭೆಗಳನ್ನು ನಡೆಸಿಕೊಟ್ಟು ಗ್ರಾಮಸ್ಥರಿಗೆ ನ್ಯಾಯ ಒದಗಿಸಬೇಕಾಗಿ ಮನವಿಯಲ್ಲಿ ವಿನಂತಿಸಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸುಭೋದ್ ಶೆಟ್ಟಿ ಮೇನಾಲ, ಗುರುದತ್ ನಾಯಕ್ ಕಾಂತಮಂಗಲ, ಸೀತಾರಾಮ ಕರ್ಲಪ್ಪಾಡಿ, ಸುಂದರ ನೆಹರೂನಗರ, ಕಿಟ್ಟಣ್ಣ ರೈ ಮೇನಾಲ, ಕರುಣಾಕರ ಅಡ್ಪಂಗಾಯ, ಶಶಿಧರ ಶಿರಾಜೆ, ಮಹೇಶ್ ರೈ ಮೇನಾಲ, ಮುರಳಿ ವಾಲ್ತಾಜೆ, ವಿಕ್ರಮ್ ಅಡ್ಪಂಗಾಯ, ನಾರಾಯಣ ಬಂಟ್ರಬೈಲು, ಹರ್ಷಿತ್ ದೊಡ್ಡೇರಿ, ಆಶಿಕ್ ಬಸವನಪಾದೆ, ಕಮಲಾಕ್ಷ ರೈ ಮೇನಾಲ, ಪ್ರಬೋದ್ ಶೆಟ್ಟಿ ಮೇನಾಲ, ನಾಗೇಶ್ ಶೆಟ್ಟಿ ಮೇನಾಲ, ಸುನಿಲ್ ರೈ ಮೇನಾಲ, ಅಕ್ಷಯ್ ರೈ ಮೊದಲಾದವರಿದ್ದರು.
ಮನವಿ ಸ್ವೀಕರಿಸಿದ ಬಳಿಕ ಮನವಿದಾರರೊಂದಿಗೆ ಮಾತನಾಡಿದ ಗ್ರಾ.ಪಂ. ಪಿಡಿಒ ರವರು “ಮುಳ್ಯ ಹಾಗೂ ಬಸವನಪಾದೆ ಜಂಕ್ಷನ್‌ನಲ್ಲಿ ಕಟ್ಟೆ ನಿರ್ಮಾಣವಾಗಿರುವ ವಿಚಾರ ಇರ್ತ್ಯವಾಗದೆ ನಾವು ವಾರ್ಡ್ ಸಭೆಗಳಿಗೆ ಬರುವುದಿಲ್ಲವೆಂದು ೫ ಗ್ರಾ.ಪಂ. ಸದಸ್ಯರು ಹೊರತು ಪಡಿಸಿ ಉಳಿದವರು ಹೇಳಿದ್ದಾರೆ. ನಾನು ಪ್ರತೀ ಸಾಮಾನ್ಯ ಸಭೆಯಲ್ಲಿಯೂ ವಾರ್ಡ್ ಸಭೆ, ಗ್ರಾಮ ಸಭೆ ಆಗದಿರುವ ಕುರಿತು ಹೇಳಿತ್ತಿದ್ದೆನೆ. ಮೊನ್ನೆ ತಾ.ಪಂ. ಇ.ಒ. ರಿಗೂ ಈ ವಿಷಯ ತಿಳಿಸಿದಾಗ ಆಕ್ಟ್ ಪ್ರಕಾರ ಏನಾಗಬೇಕೋ ಆ ರೀತಿ ಮಾಡಿ ಎಂದು ಹೇಳಿದ್ದರಿಂದ ನಾವು ಪಿಆರ್‌ಡಿ ಇಂಜಿನಿಯರಿಗೆ ಪತ್ರ ಬರೆದಿzವೆ ಎಂದು ಹೇಳಿದರು. “ಕಟ್ಟೆ ನಿರ್ಮಾಣ ವಿಚಾರ ಮತ್ತು ಗ್ರಾ.ಪಂ. ವಾರ್ಡ್ ಸಭೆಗಳನ್ನು ನಡೆಸುವುದಕ್ಕೆ ಸಂಬಂಧ ವಿಲ್ಲ. ಅದು ಕಾನೂನು ರೀತಿಯಲ್ಲಿ ಇತ್ಯರ್ಥ ಪಡಿಸಿಕೊಳ್ಳಿ, ಆದರೆ ಗ್ರಾಮ ಸಭೆಗಳು ಆಗದಿದ್ದರೆ ಜನರಿಗೆ ತೊಂದರೆ. ನಿಮಗೆ ರಕ್ಷಣೆ ಬೇಕಿದ್ದರೆ ನಾವು ನೀಡುತ್ತೇವೆ. ಆದಷ್ಟು ಶೀಘ್ರ ಸಭೆ ನಡೆಸಬೇಕೆಂದು ಮನವಿ ದಾರರ ಪರವಾಗಿ ನವೀನ್ ರೈ ಮೇನಾಲ ವಿನಂತಿಸಿಕೊಂಡರು.
ಬಳಿಕ ತಾ.ಪಂ. ಇಒ ಭವಾನಿಶಂಕರರನ್ನು ಭೇಟಿಯಾದ ಗ್ರಾಮಸ್ತರು ಮನವಿ ಸಲ್ಲಿಸಿದರು.