ಸುಬ್ರಹ್ಮಣ್ಯ ರೋಟರಿ ಕ್ಲಬ್  ಮತ್ತು ಇನ್ನರ್ ವೀಲ್ ಕ್ಲಬ್ ಸುಬ್ರಹ್ಮಣ್ಯ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ

0

 

ರೋಟರಿ ಕ್ಲಬ್ ಸುಬ್ರಹ್ಮಣ್ಯ ಮತ್ತು ಇನ್ನರ್ ವೀಲ್ ಕ್ಲಬ್ ಸುಬ್ರಹ್ಮಣ್ಯ ಇವುಗಳ ಜಂಟಿ ಆಶ್ರಯದಲ್ಲಿ ಸೆ.8 ರಂದು ಸುಬ್ರಹ್ಮಣ್ಯದ ರಥ ಬೀದಿಯ ಪಕ್ಕದಲ್ಲಿರುವ ವಿಷ್ಣು ವೈಭವ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ ನಡೆಯಿತು.

ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ನ ಅಧ್ಯಕ್ಷರಾದ ಗೋಪಾಲ ಎಣ್ಣೆಮಜಲು ವಹಿಸಿದ್ದರು ಮತ್ತು ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ಸರೋಜ ಮಾಯಿಲಪ್ಪ, ಅಸಿಸ್ಟೆಂಟ್ ಗವರ್ನರ್ ಶಿವರಾಮ ಏನೆಕಲ್ಲು, ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಕಾರ್ಯದರ್ಶಿ ಡಾ. ರವಿ ಕಕ್ಕೆಪದವು, ನಿಕಟಪೂರ್ವ ಅಧ್ಯಕ್ಷ ವಿಜಯಕುಮಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಸದಸ್ಯ ಶಿಕ್ಷಕರಾದ ಶಿವರಾಮ ಏನೆಕಲ್ಲು, ವಿಶ್ವನಾಥ ನಡುತೋಟ , ರಾಮಕೃಷ್ಣ ಮಲ್ಲಾರ , ವಿಜಯಕುಮಾರ್ ಅಮೈ, ಲೀಲಾ ವಿಶ್ವನಾಥ ನಡುತೋಟ , ಚಂದ್ರಶೇಖರ ಗಿರೀಶ್, ಜಯಪ್ರಕಾಶ್ , ಇವರುಗಳನ್ನು ರೋಟರಿ ಕ್ಲಬ್ ವತಿಯಿಂದ ಗೌರವಿಸಲಾಯಿತು .ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರಾದ ಗಿರಿಧರ ಸ್ಕಂದ ಇವರು ಶಿಕ್ಷಕರ ದಿನದ ಮಹತ್ವವನ್ನು ಸಭೆಗೆ ವಿವರಿಸಿದರು , ಕ್ಲಬ್ ನ ಸದಸ್ಯರಾಗಿದ್ದು ಏನೆಕಲ್ಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಅತ್ಯುತ್ತಮ ಸಂಘ ಪ್ರಶಸ್ತಿ ಪಡೆದಿದ್ದಕ್ಕಾಗಿ ಭರತ್ ನೆಕ್ರಾಜೆ ಇವರನ್ನು ಗೌರವಿಸಲಾಯಿತು’.

ಚಂದ್ರಶೇಖರ್ ನಾಯರ್ ಓಣಂ ಹಬ್ಬದ ಪ್ರಯುಕ್ತ ಸಭೆಗೆ ಸಿಹಿ ತಿಂಡಿ ವಿತರಿಸಿದರು , ಸುಬ್ರಹ್ಮಣ್ಯ ರೋಟರಿ ಕ್ಲಬ್ ಪೂರ್ವಾಧ್ಯಕ್ಷರಾದ ಎಚ್ ಎಲ್ ವೆಂಕಟೇಶ ಇವರನ್ನು ಈ ಬಾರಿಯ ಸಾರ್ವಜನಿಕ ಗಣೇಶೋತ್ಸವ ಅಧ್ಯಕ್ಷತೆ ವಹಿಸಿ ಯಶಸ್ವಿಗೊಳಿಸಿದ್ದಕ್ಕಾಗಿ ಗೌರವಿಸಲಾಯಿತು. ಸಭೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶೋಭಾ ಗಿರಿಧರ ಮತ್ತು ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸದಸ್ಯರಾದ ಭಾರತಿ ದಿನೇಶ್ ಉಪಸ್ಥಿತರಿದ್ದರು ..ಪೂರ್ವ ಅಧ್ಯಕ್ಷರಾದ ಮಾಯಿಲಪ್ಪ ಸಂಕೇಶ ,ಲೋಕೇಶ್ ಬಿ ಎನ್,ಉಮೇಶ್ ಕೆ ಎನ್ ರೋಹಿತ್ ಬಿ ಬಿ ಪ್ರದೀಪ್ ಉಪಸ್ಥಿತರಿದ್ದರು .