ಐವರು ಶಿಕ್ಷಕರುಗಳಿಗೆ ಸುಳ್ಯ ರೋಟರಿ ನೇಷನ್ ಬಿಲ್ಡರ್ ಶಿಕ್ಷಕ ಪ್ರಶಸ್ತಿ ಪ್ರದಾನ

0

 

ರೋಟರಿ ಕ್ಲಬ್ ಸುಳ್ಯ ವತಿಯಿಂದ ಐವರು ಶಿಕ್ಷಕರಿಗೆ ನೇಷನ್ ಬಿಲ್ಡರ್ ಶಿಕ್ಷಕ ಪ್ರಶಸ್ತಿ ಪ್ರದಾನ ಸೆ.7ರಂದು ನಡೆಯಿತು.

 

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಎನ್ನೆಂಪಿಯುಸಿ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ಭಾಗವಹಿಸಿರು.
ರೋಟರಿ ಸಂಸ್ಥೆಯಿಂದ ಸಹಿಪ್ರಾ ಶಾಲೆ ಜಯನಗರ ಇದರ ದೈಹಿಕ ಶಿಕ್ಷಕ ತೀರ್ಥರಾಮ ಎ, ಸ .ಪ್ರೌಢಶಾಲೆ ಅಜ್ಜಾವರದ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಪಿ, ಸ.ಹಿ.ಪ್ರಾ ಶಾಲೆ ಸೋಣಂಗೇರಿ ಸಹ ಶಿಕ್ಷಕಿ ಸವಿತಾ ಎನ್ ಪಿ, ಸ.ಹಿ. ಪ್ರಾ ಶಾಲೆ ಜಟ್ಟಿಪಳ್ಳ ಇದರ ಸಹಶಿಕ್ಷಕಿ ಕೇಸರಿ ಮತ್ತು ಸ ಕಿ ಪ್ರಾ ಶಾಲೆ ಅಜ್ಜಾವರ ಮೇನಾಲ ಇದರ ಶಿಕ್ಷಕಿ ಕನಕ ಎನ್ ಎನ್ ಇವರನ್ನು ನೇಷನ್ ಬಿಲ್ಡರ್ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದರ ಜೊತೆಗೆ ರೋಟರಿ ಸಂಸ್ಥೆಯ ಶಿಕ್ಷಕ ವೃತ್ತಿಯಲ್ಲಿರುವ ಸದಸ್ಯರಿಗೂ ಗೌರವಾರ್ಪಣೆ ನಡೆಸಲಾಯಿತು. ಸಭೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಪ್ರಭಾಕರನ್ ನಾಯರ್, ಟೀಚ್ ನಿರ್ದೇಶಕಿ ಮೀನಾಕ್ಷಿ ಎಂ ಗೌಡ, ವೃತ್ತಿ ಸೇವೆ ನಿರ್ದೇಶಕಿ ಲತಾ ಮಧುಸೂಧನ್, ಆನಂದ ಖಂಡಿಗ ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷ ಚಂದ್ರಶೇಖರ್ ಪೇರಾಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಚಂದ್ರಮತಿ ಪ್ರಾರ್ಥನೆ ಗೈದರು. ಶ್ರೀಮತಿ ಮಧುರಾ ಎಂ.ಆರ್. ವಂದಿಸಿದರು.

LEAVE A REPLY

Please enter your comment!
Please enter your name here