ಸಂಪಾಜೆ ಸೊಸೈಟಿ ವತಿಯಿಂದ ಹೆಚ್.ಬಿ. ಜನಾರ್ದನರಿಗೆ ಮತ್ತು ಸೀತಾರಾಮ ಬಾಚಿಗದ್ದೆಯವರಿಗೆ ಶ್ರದ್ದಾಂಜಲಿ ಸಭೆ

0
133

 

ಸಂಪಾಜೆ ಪ್ರಾ.ಕೃ.ಪ.ಸ.ಸಂಘದ ವತಿಯಿಂದ ಹೆಚ್.ಬಿ. ಜನಾರ್ದನರಿಗೆ ಮತ್ತು ಸೀತಾರಾಮ ಬಾಚಿಗದ್ದೆಯವರಿಗೆ ಶ್ರದ್ದಾಂಜಲಿ ಸಭೆ ಇಂದು ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.
ಸುಮಾರು ೩೩ ವರ್ಷಗಳ ಕಾಲ ಸೊಸೈಟಿಯಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಹೆಚ್.ಬಿ.ಜನಾರ್ದನ ಮತ್ತು ಮಾರಾಟ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಸೀತಾರಾಮ ಬಾಚಿಗದ್ದೆಯವರಿಗೆ ಸೊಸೈಟಿ ವತಿಯಿಂದ ಶ್ರದ್ದಾಂಜಿ ಅರ್ಪಿಸಲಾಯಿತು. ಇವರ ಬಗ್ಗೆ ಬ್ಯಾಂಕ್‌ನ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆಯವರು ಮಾತನಾಡಿ, ಇವರು ನೇರ ನಡೆ ನುಡಿಯ ಕಾರ್ಯದರ್ಶಿಯಾಗಿ ಪ್ರೀತಿ, ವಿಶ್ವಾಸದಿಂದ ಸಂಸ್ಥೆಯ ಏಳಿಗೆಗಾಗಿ ದುಡಿದವರು ಎಂದರು. ನಂತರ ಮಾಜಿ ಅಧ್ಯಕ್ಷ ಕೆ.ಪಿ.ಜಗದೀಶ್, ನಿರ್ದೇಶಕ ಗಣಪತಿ ಭಟ್, ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಶ್ರೀಮತಿ ರಾಜೀವಿ ಮೃತರ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರಕುಮಾರ್ ಜೈನ್, ನಿರ್ದೇಶಕರುಗಳು, ನವೋದಯ ಸಂಘದ ಪ್ರೇರಕಿ, ಬ್ಯಾಂಕ್‌ನ ಸಿಬ್ಬಂದಿಗಳು ಮತ್ತು ಸದಸ್ಯರುಗಳು ಭಾಗವಹಿಸಿದ್ದರು. ಕೆ.ಪಿ.ಜಾನಿ ವಂದಿಸಿದರು.

LEAVE A REPLY

Please enter your comment!
Please enter your name here