ಗುತ್ತಿಗಾರಿನ ಪದವಿ ಪೂರ್ವ ಕಾಲೇಜು : ಬಾಲಕರ ವಾಲಿಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪದವಿ ಪೂರ್ವ ಶಿಕ್ಷಣ ಇಲಾಖೆ ದ.ಕ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು, ಸುಳ್ಯ ತಾಲೂಕು ಇವರ ಜಂಟಿ ಆಶ್ರಯದಲ್ಲಿ  08 ರಂದು ನಡೆದ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಬಾಲಕರ ತಂಡವು ಫೈನಲ್ ಪಂದ್ಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ತಂಡವನ್ನು ಮಣಿಸುವುದರೊಂದಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡು ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ ವಿನೋದ್ ಸಿ., ಸುಪ್ರೀತ್ ಕೆ.ಪಿ, ನಿಖಿಲ್ ಕೆ ಎಸ್, ಆದಿತ್ಯ, ಓಂಪ್ರಸಾದ್, ರಿತೇಶ್.ಹೆಚ್, ಮಿಥುನ್.ಬಿ, ರಂಜನ್ ಡಿ., ಸಿಂಚನ್ ಬಿ ಎಸ್, ಗೋಪಿ.ಎಸ್,ರಂಜಿತ್,ರವಿ ಭಾಗವಹಿಸಿದರು.

ವಿನೋದ್.ಸಿ ಸರ್ವಾಂಗೀಣ ಆಟಗಾರ ಹಾಗೂ ಸುಪ್ರೀತ್.ಕೆ.ಪಿ ಉತ್ತಮ ಪಾಸರ್ ಪ್ರಶಸ್ತಿಯನ್ನು ಪಡೆದುಕೊಂಡರು. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ್ ಏನೆಕಲ್ಲು ತರಬೇತಿ ನೀಡಿರುತ್ತಾರೆ. ತಂಡದ ನಿರ್ದೇಶಕರಾಗಿ ಪ್ರಾಂಶುಪಾಲರಾದ ಚೆನ್ನಮ್ಮ ಪಿ .ಹಾಗೂ ಎಲ್ಲಾ ಉಪನ್ಯಾಸಕ ವೃಂದ ತಂಡ ಸಂಯೋಜನೆ ಸಹಕರಿಸಿರುತ್ತಾರೆ.