ಅನಾರೋಗ್ಯ ಪೀಡಿತ ಮಗುವಿಗೆ ಚಿಕಿತ್ಸೆ ನೆರವಿಗಾಗಿ ಶಾಹಜಾನ್ ನಿಲಂಬೂರ್ ಸುಳ್ಯಕ್ಕೆ ಭೇಟಿ

0

 

ನಾವೂರು ಮಗುವಿನ ಮನೆಯಿಂದ ಧನಸಂಗ್ರಹಕ್ಕೆ ಚಾಲನೆ

ಮಗುವಿನ ಚಿಕಿತ್ಸೆಗೆ ಬೇಕಾಗುವ 40ಲಕ್ಷ ಸಂಗ್ರಹದ ಗುರಿ

ಸುಳ್ಯ ನಗರ ಸಮೀಪದ ನಾವೂರು ನಿವಾಸಿಯಾದ ಮುನಾಫರ್ ಎಂಬವರ ಕೇವಲ ಎರಡೂವರೆ ವರ್ಷ ಪ್ರಾಯ ಇರುವ ಅಯಿಷಾ ಮಿಝಾ ಎಂಬ ಸಣ್ಣ ಮಗು ತಲ್ಸೀಮಿಯಾ ಮೇಜರ್ ಎಂಬ ಮಾರಕವಾದ ರೋಗದಿಂದ ಬಳಲುತ್ತಿದ್ದು ಆದ್ದರಿಂದ ಆ ಮಗುವಿಗೆ ಅತೀ ತುರ್ತು ಚಿಕಿತ್ಸೆಗೆ ಬೇಕಾಗಿದೆ ಸುಮಾರು ₹40 ಲಕ್ಷ ರೂಪಾಯಿ ಅ ಬೃಹತ್ ಮೊತ್ತವನ್ನು ಸಂಗ್ರಹವನ್ನು ಮಾಡಲು ಪ್ರಖ್ಯಾತ ಚಾರಿಟಿ ಸಮಾಜ ಸೇವಕ ಗ್ಲೋಬಲ್ ಗೀವರ್ಸ್ ಚಾರಿಟಿ ಇದರ ಶಹಜಾನ್ ನಿಲಂಬೂರ್ ಮತ್ತವರ ತಂಡ ಸೆ.9 ರಂದು ಸುಳ್ಯ ಗಾಂಧಿನಗರ ಬೊರುಗುಡ್ಡೆ ಮುನಾಫರ್ ರವರ ಮನೆಗೆ ಭೇಟಿ ನೀಡಿದರು.

ಅವರು ಸಮಾಜದ ಗಣ್ಯರು ಮತ್ತು ದಾನಿಗಳನ್ನು ಸ್ಥಳೀಯರನ್ಮು ಮಗುವಿಗೆ ರೋಗದ ಬಗ್ಗೆ ವಿವರಿಸಿ ಅದಕ್ಕೆ ಎಲ್ಲರೂ ಸಹಕಾರ ಮಾಡಬೇಕು ಎಂದು ವಿಡಿಯೋ ಮಾಡಿ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅದಕ್ಕಾಗಿ ಚಾರಿಟಿ ಸಂಸ್ಥೆ ಹೆಸರಿನೊಂದಿಗೆ ಬ್ಯಾಂಕ್ ಖಾತೆಯನ್ನು ತೆರಿದಿದ್ದಾರೆ.ಬ್ಯಾಂಕ್ ಖಾತೆ ನಂಬ್ರವನ್ನು ಮತ್ತು ನಿಲಂಬೂರ್ ಮಾಡಿದ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡಿಸಿ ಹಣ ಸಂಗ್ರಹ ಮಾಡಿ ಮಗುವಿನ
ನೆರವಾಗಲಿದ್ದಾರೆ.

ರಾಜ್ಯ ಜೆಡಿಎಸ್ ವಕ್ತಾರ ಎಂ ಬಿ ಸದಾಶಿವ ,ಸಯ್ಯದ್ ಕುಂಞಿಕೋಯ ತಂಙಳ್,ಪಾ.
ಶಹಜಾನ್ ರವರ ವಿಡಿಯೋದಲ್ಲಿ ಮಗುವಿನ ಚಿಕಿತ್ಸೆಗಾಗಿ ಮನವಿ ಮಾಡಿದರು.
ಶಹಜಾನ್ ತಂಡದ ಸದಸ್ಯರಾದ ಅನೀಲ್,ಜಾಬೀರ್ ನಿಝಾಮಿ,ವಿನು,ರಜಾಕ್ ಕುಶಾಲನಗರ ವಿಡಿಯೋ ಚಿತ್ರೀಕರಣದಲ್ಲಿ ಸಹಕರಿಸಿದರು.

ಸ್ಥಳದಲ್ಲಿಯೇ ಧನಸಂಗ್ರಹಕ್ಕೆ ಚಾಲನೆ
ಶಹಜಾನ್ ನಿಲಂಬೂರ್ ಅವರ ವಿನಂತಿ ಆಲಿಸಿ ಮತ್ತು ಮಗುವಿನ ಚಿಕಿತ್ಸೆಗಾಗಿ ಸ್ಥಳದಲ್ಲಿ ಉಪಸ್ಥಿತಿ ಇದ್ದ ಕೆಪಿಸಿಸಿ ಸುಳ್ಯ ಬ್ಲಾಕ್ ಸಂಯೋಜಕ ಹೆಚ್ ಎಂ ನಂದಕುಮಾರ್,ಎ ಪಿ ಎಂ ಸಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ,ನ್ಯಾಯವಾದಿ ಮಹಮ್ಮದ್ ಪವಾಜ್ ಕನಕಮಜಲು ತಲಾ ಹತ್ತತ್ತು ಸಾವಿರ ನೀಡಿ ಮಗುವಿನ ಚಿಕಿತ್ಸೆ ನೆರವು ಸಂಗ್ರಹ ಕಾರ್ಯಕ್ಕೆ ಕೈಜೋಡಿಸಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ, ಕೆಪಿಸಿಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ,ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪಿ ಎಸ್ ಗಂಗಾಧರ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ ಎಸ್,ಶರೀಫ್ ಕಂಠಿ,ರಿಯಾಜ್ ಕಟ್ಟೆಕ್ಕಾರ್,ಗಾಂಧಿ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಂ ಮುಸ್ತಫಾ, ಅಲ್ಪಸಂಖ್ಯಾತ ಹಾಜಿ ಇಬ್ರಾಹಿಂ ಕತ್ತಾರ್, ಅಧ್ಯಕ್ಷ ಇಕ್ಬಾಲ್ ಎಲಿಮಲೆ, ನ.ಪಂ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್,ಹಾಜಿ ಅಬ್ದುಲ್ ಹಮೀದ್ ಎಸ್ ಎಂ,ಅನ್ಸಾರ್ ಅಧ್ಯಕ್ಷ ಹಾಜಿ ಶುಕೂರ್,ಅನ್ಸಾರಿಯ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್,ಕಾರ್ಯದರ್ಶಿ ಲತೀಫ್ ಹರ್ಲಡ್ಕ ,ಸಾಮಾಜಿಕ ಕಾರ್ಯಕರ್ತರಾದ ರಶೀದ್ ಜಟ್ಟಿಪಳ್ಳ, ಅರ್ ಕೆ ಮಹಮ್ಮದ್, ಶಮೀರ್ ಮೊಬೈಲ್ ಹಾರ್ಟ್ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.

LEAVE A REPLY

Please enter your comment!
Please enter your name here