ಏನೆಕಲ್ಲು ಹಾಲು ಸೊಸೈಟಿ ಮಹಾಸಭೆ: ರೂ. 7.17 ಲಕ್ಷ ಲಾಭ

0

 

ಏನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸೆ. 8ರಂದು ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಭರತ್ ನೆಕ್ರಾಜೆಯವರ ಅಧ್ಯಕ್ಷತೆಯಲ್ಲಿ ಜರುಗಿತು.


ಸಂಘವು ಹಾಲು ವ್ಯವಹಾರದಿಂದ ರೂ. 5.98ಲಕ್ಷ, ಪಶು ಆಹಾರ ಮಾರಾಟದಿಂದ ರೂ. 41 ಲಕ್ಷ ಮತ್ತು ಇತರ ಮೂಲಗಳಿಂದ ರೂ. 71ಸಾವಿರ ಲಾಭ ಒಟ್ಟು ಲಾಭ ರೂ. 17 ಲಕ್ಷ ಲಾಭಗಳಿಸಿ ಎಲ್ಲಾ ಖರ್ಚು ಕಳೆದು ನಿವ್ವಳ ಲಾಭ ರೂ. 2.07 ಲಕ್ಷ ನಿವ್ವಳ ಲಾಭ ಗಳಿಸಿದೆ ಸಂಘದ ಕಾರ್ಯದರ್ಶಿ ಶ್ರೀಮತಿ ಗೀತಾ ತಮ್ಮ ವರದಿಯಲ್ಲಿ ತಿಳಿಸಿದರು. ಸಂಘಕ್ಕೆ ವರದಿ ವರ್ಷದಲ್ಲಿ ಅತಿ ಹೆಚ್ಚು ಹಾಲು ಹಾಕಿದ ಸದಸ್ಯರನ್ನು ಬಹುಮಾನ ನೀಡಿ ಗೌರಿಸಲಾಯಿತು. ಕೆಎಂಎಫ್ ನ ವ್ಯವಸ್ಥಾಪಕ, ಶೇಖರಣೆ ಮತ್ತು ತಾಂತ್ರಿಕ ಡಾಕ್ಟರ್ ನಿತ್ಯಾನಂದ ಭಕ್ತ ಇವರು ಹೈನುಗಾರಿಕೆಯ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕೆ ಎಂಎಫ್ ನ ಉಪ ವ್ಯವಸ್ಥಾಪಕರಾದ ಡಾಕ್ಟರ್ ಸತೀಶ್ ರಾವ್, ಹರೀಶ್ ಕುಮಾರ್ ಎಂ.ಎಸ್, ಸಂಘದ ಉಪಾಧ್ಯಕ್ಷರಾದ ಸುರೇಶ್ ಬಾಲಾಡಿ ನಿರ್ದೇಶಕರುಗಳಾದ ರಾಮಣ್ಣ ಗೌಡ, ಗಂಗಾಧರ ಪಿ, ಗಣೇಶ್ ಕೆ.ಎಸ್, ದಿನೇಶ್ ಕೆ,ಲಕ್ಷ್ಮೀನಾರಾಯಣ ಯು, ಪರಮೇಶ್ವರ ಪರವ, ರಮೇಶ್ ನಾಯ್ಕ, ಶ್ರೀಮತಿ ಶೀಲಾ ಕುಮಾರಿ ಉಪಸ್ಥಿತರಿದ್ದರು. ಇತ್ತೀಚೆಗೆ ಸುರಿದ ಬಾರಿ ಮಳೆಯಿಂದಾಗಿ ತೊಂದರೆಗೆ ಒಳಗಾದ ಸಂಘದ ಸದಸ್ಯ ಲಿಂಗಪ್ಪ ಗೌಡ ಪರಮಲೆಯವರಿಗೆ 5,000/- ಪರಿಹಾರ ವಿತರಿಸಲಾಯಿತು. ಸದಸ್ಯ ಅಶೋಕ ಅಂಬೆಕಲ್ಲು ಪ್ರಾರ್ಥಿಸಿದರು. ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಶಿವಪ್ರಸಾದ್ ಮಾದನಮನೆ ಸ್ವಾಗತಿಸಿ ನಿರ್ದೇಶಕಿ ದೇವಿ ಕೃಪಾ ಪರಮಲೆ ವಂದಿಸಿದರು. ಸಂಘದ ಸಿಬ್ಬಂದಿಗಳಾದ ಶ್ರೀಮತಿ ಚಂದ್ರಾವತಿ ಪಿ, ಶ್ರೀಮತಿ ಚಂದ್ರಾವತಿ, ಸುಜಿತ್ ಪಿ ಮತ್ತು ಕೃತಕ ಗರ್ಭಧಾರಣಾ ಕಾರ್ಯಕರ್ತ ಶಿವಪ್ರಸಾದ್ ಬಿ ಸಹಕರಿಸಿದರು. ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.