ಬಾಳಿಲ: ಹೆಣ್ಣು ಶಿಶು ಪ್ರದರ್ಶನ, ರಾಷ್ಟ್ರೀಯ ಪೌಷ್ಠಿಕಾಹಾರ ಸಪ್ತಾಹ

0

 

 

ಮಹಿಳಾ ಮತ್ತು ಮಕ್ಜಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜ, ಉಪಕೇಂದ್ರ ಮುಪ್ಪೇರ್ಯ, ಮಂಜುಶ್ರೀ ಸ್ತ್ರೀ ಶಕ್ತಿ ಗೊಂಚಲು ಸಮಿತಿ ಬಾಳಿಲ ಮುಪ್ಪೇರ್ಯ ಇವುಗಳ ಆಶ್ರಯದಲ್ಲಿ ಹೆಣ್ಣು ಶಿಶು ಪ್ರದರ್ಶನ, ರಾಷ್ಟ್ರೀಯ ಪೌಷ್ಠಿಕಾಹಾರ ಸಪ್ತಾಹ, ಪೋಷಣ್ ಅಭಿಯಾನ ಯೋಜನೆ, ಮಾತೃವಂದನಾ, ಸ್ತ್ರೀ ಶಕ್ತಿ ಗೊಂಚಲು ಸಭೆ ಹಾಗೂ ಡೆಂಗೀ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಇಂದ್ರಾಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ. 9ರಂದು ನಡೆಯಿತು.
ಕಾರ್ಯಕ್ರಮವನ್ನು ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸವಿತ ಚಾಕೊಟಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರೇಖಾ ರವಿರಾಜ್ ಹಾಗೂ ಅಮೃತ ಆರೋಗ್ಯ ಯೋಜನೆಯ ತಾಲೂಕು ಸಂಯೋಜನಾಧಿಕಾರಿ ಗೀತ ಮಾಹಿತಿ ನೀಡಿದರು. ಪೌಷ್ಠಿಕಾಹಾರ ಸಪ್ತಾಹದ ಅಂಗವಾಗಿ ಸ್ತ್ರೀ ಶಕ್ತಿ ಸಂಘದ ಸದಸ್ಯರು ಪೌಷ್ಠಿಕ ಪಾನೀಯ, ವಿವಿಧ ಪೌಷ್ಠಿಕ ಆಹಾರಗಳನ್ನು ಹಾಗೂ ಸ್ಥಳೀಯವಾಗಿ ಲಭ್ಯವಿರುವ ವಿವಿಧ ತಿನಿಸುಗಳನ್ನು ತಯಾರಿಸಿದ್ದರು. ಪೌಷ್ಠಿಕ ಆಹಾರಗಳ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಹೆಣ್ಣು ಮಗುವಿನ ಪ್ರದರ್ಶನ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಇಂದ್ರಾಜೆ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಯಂ.ಸಿ ಅಧ್ಯಕ್ಷ ಶಿವರಾಮ ಕೊಳೆಂಜಿಕೋಡಿ, ಬಾಳಿಲ ಗ್ರಾ. ಪಂ. ಸದಸ್ಯರಾದ ಪಾವನ ಹಾಗೂ ಸುಶೀಲರವರು ಉಪಸ್ಥಿತರಿದ್ದರು. ಮಂಜುಶ್ರೀ ಸ್ತ್ರೀ ಶಕ್ತಿಯ ಗೊಂಚಲು ಸಮಿತಿಯ ಅಧ್ಯಕ್ಷೆ ಮಂಜುಳ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಪಂಜ ವಲಯದ ಅಂಗನವಾಡಿ ಮೇಲ್ವಿಚಾರಕಿ ರವಿಶ್ರೀ ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ರೂಪಲತಾ ಪಿ ಪ್ರಾರ್ಥಿಸಿದರು.
ಇಂದ್ರಾಜೆ ಅಂಗನವಾಡಿ ಕಾರ್ಯಕರ್ತೆ ಮಮತಾ ಜೆ ಸ್ವಾಗತಿಸಿದರು. ಸರಿತಾ ಕಂಡಿಕಟ್ಟ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ಬಾಳಿಲ ಅಂಗನವಾಡಿ ಕಾರ್ಯಕರ್ತೆ ಎ. ದಯಾನಂದಿನಿ, ಬಾಳಿಲ ಇಂದ್ರಾಜೆ ವ್ಯಾಪ್ತಿಯ ಸ್ತ್ರೀ ಶಕ್ತಿ ಸದಸ್ಯರು, ತಾಯಂದಿರು ಹಾಜರಿದ್ದು ಸಹಕರಿಸಿದರು. ಜಾಹ್ನವಿ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು.