ಮುರುಳ್ಯ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

0

ಮುರುಳ್ಯ ಸ.ಉ.ಹಿ.ಪ್ರಾ.ಶಾಲೆ ಸೆ. ರಂದು ಎಣ್ಮೂರ್ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆ ಯು ನಡೆಯಿತು.

ಒಟ್ಟು 14 ಶಾಲೆಯ 260 ಮಕ್ಕಳು ಭಾಗವಹಿಸಿದ್ದು,ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಜಾನಕಿ ಮುರುಳ್ಯ ಉದ್ಘಾಟಿಸಿದರು. ವೇದಿಕೆಯ ಲ್ಲಿ ಸಮನ್ವಯಾಧಿಕಾರಿಗಳಾದ ಶೀತಲ್ ಯು.ಕೆ,ಎಸ್.ಡಿ.ಎಂ.ಸಿ.ಅಧ್ಯಕ್ಷ ರಾದ ಮಧು ಪಿ.ಆರ್,ಸದಸ್ಯರಾದ ಅವಿನಾಶ್ ಡಿ,ಶಿಕ್ಷಣ ಸಂಯೋಜಕ ರಾದ ಸಂಧ್ಯಾಕುಮಾರಿ,ಶಿಕ್ಷಕ ಸಂಘದ ಕಾರ್ಯ ದರ್ಶಿಗಳಾದ ಸರೋಜಿನಿ .ಕೆ,ಕ್ಲಸ್ಟರ್ ಸಿಆರ್ ಪಿಗಳಾದ ಜಯಂತ ಕೆ,ಮುಖ್ಯ ಗುರುಗಳಾದ ಶಶಿಕಲಾ ಉಪಸ್ಥಿತರಿದ್ದು ಶುಭಹಾರೈಸಿದರು. ದಿನದ ಕೊನೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನೂಜಾಡಿ ಮಾತಾಡಿ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಮುರುಳ್ಯ ಶಾಲೆಯು ಹಿರಿಯ ಪ್ರಥಮ ಸಮಗ್ರ ಹಾಗೂ ಕಿರಿಯ ದ್ವಿತೀಯ ಸಮಗ್ರ ಪ್ರಶಸ್ತಿ ಯನ್ನು ಪಡೆದುಕೊಂಡಿತು.

 

LEAVE A REPLY

Please enter your comment!
Please enter your name here