ಅಯ್ಯನಕಟ್ಟೆ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ರೈಟ್ ಟು ಲಿವ್ ಕೋಟೆ ಫೌಂಡೇಶನ್ ವತಿಯಿಂದ ಬ್ಯಾಗ್ ಹಂಚಿಕೆ

0

 

ರಘುರಾಮ ಕೋಟೆ ಹಾಗೂ ಕೋಟೆ ಫೌಂಡೇಶನ್ ರೈಟ್ ಟು ಲೀವ್ ಸಂಸ್ಥೆ ವತಿಯಿಂದ ಅಯ್ಯನಕಟ್ಟೆ ಶಾಲೆಯ 111 ಮಕ್ಕಳಿಗೆ ಬ್ಯಾಗ್ ವಿತರಿಸುವ ಕಾರ್ಯಕ್ರಮ ಸೆ. 10ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಕೋಟೆ ಫೌಂಡೇಶನ್ ಶ್ರೀಮತಿ ಪಾರ್ವತಿ ಕೋಟೆ, ಶ್ರೀಮತಿ ಶಶಿಕಲಾ, ಗಣಪಯ್ಯ ಪೆರುವಾಜೆ, ಸಾಯಿ ರಂಜನ್ ಕಲ್ಚಾರ್, ಪ್ರದೀಪ್ ಉಬರಡ್ಕ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಸತೀಶ್ ಚಂದ್ರ ಪಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶೀಲಾವತಿ ಎ.ಎಸ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಶ್ರೀಮತಿ ಗೀತಾ ಸ್ವಾಗತಿಸಿ ಶ್ರೀಮತಿ ಶೈನಿ ಕೆ ವಂದಿಸಿದರು. ಶ್ರೀಮತಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪೋಷಕರು ವಿದ್ಯಾರ್ಥಿಗಳು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.