ಸುಳ್ಯ ರೈತ ಉತ್ಪಾದಕ ಕಂಪೆನಿಯ ವಾರ್ಷಿಕ ಮಹಾಸಭೆ ಮತ್ತು ಷೇರು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ

0

ಸುಳ್ಯ ರೈತ ಉತ್ಪಾದಕ ಕಂಪೆನಿ ನಿಯಮಿತ ಇದರ ವಾರ್ಷಿಕ ಮಹಾಸಭೆ ಮತ್ತು ಷೇರು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಸೆ. 10ರಂದು ಶ್ರೀ ದುರ್ಗಾಪರಮೇಶ್ವರಿ ಸಭಾಭವನ ಕೇರ್ಪಳ ಸುಳ್ಯದಲ್ಲಿ ಇಂದು ನಡೆಯಿತು.


ಸುಳ್ಯ ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ತಹಶಿಲ್ದಾರ್ ಕು.ಅನಿತಾಲಕ್ಷ್ಮಿ, ಸುಳ್ಯ ತೋಟಗಾರಿಕಾ ಇಲಾಖೆಯ ನಿರ್ದೇಶಕಿ ಶ್ರೀಮತಿ ಸುಹಾನ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ನಿರ್ದೇಶಕರುಗಳಾದ ಜಯರಾಮ ಮುಂಡೋಳಿಮೂಲೆ,ಮಧುರಾ ಮಂಡೆಕೋಲು,ನೇತ್ರಕುಮಾರ ಕನಕಮಜಲು,ನೂಜಾಲು ಪದ್ಮನಾಭ ಗೌಡ,ಶ್ರೀಶ ಕುಮಾರ್ ಮಾಯಿಪಡ್ಕ, ಸತ್ಯಪ್ರಸಾದ್ ಅಮರಪಡ್ನೂರು,ಸುರೇಶ್ ರೈ ಬಾಳಿಲ,ದೇವರಾಜ್ ಆಳ್ವ ಪೆರುವಾಜೆ, ರಾಮಕೃಷ್ಣ ಬೆಳ್ಳಾರೆ, ಲೋಹಿತ್ ಕೊಡಿಯಾಲ, ಎಂ.ಡಿ.ವಿಜಯಕುಮಾರ್ ಮಡಪ್ಪಾಡಿ, ಅಮೃತ್ ಕುಮಾರ್ ರೈ ಮರ್ಕಂಜ, ಸಂತೋಷ್ ಕುಮಾರ್ ನಡುಮುಟ್ಲು,ಭಾಸ್ಕರ ನಾಯರ್ ಅರಂಬೂರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಗಿ ನೇಮಕಗೊಂಡ ಎ.ವಿ.ತೀರ್ಥರಾಮರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾಗ ಲೋಹಿತ್ ಕೊಡಿಯಾಲ ಸ್ವಾಗತಿಸಿ, ಅಮೃತ್ ಕುಮಾರ್ ರೈ ವಂದಿಸಿದರು.ಮಧುರಾ ಎಂ.ಆರ್.ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮದ ಕುರಿತು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಡಾ.ಫಝಲ್ ಮಾಹಿತಿ ನೀಡಿದರು.
ನರ್ಸರಿ ಗಿಡಗಳ ಬಗ್ಗೆ ನರ್ಸರಿ ತಜ್ಞ ಅನಿಲ್ ಬಳಂಜ, ಸುದ್ದಿ ಕೃಷಿ ಸ್ವಾತಂತ್ರ್ಯದ ಕುರಿತು ಪುತ್ತೂರು ಸುದ್ದಿ ಕೃಷಿ ಸೇವಾ ಕೇಂದ್ರದ ಪ್ರತಿನಿಧಿ ಗಣೇಶ್ ಕಲ್ಲರ್ಪೆ ಮಾಹಿತಿ ನೀಡಿದರು.