ಮಂಡೆಕೋಲು ಸಹಕಾರಿ ಸಂಘದ ಮಹಾಸಭೆ

0

29 ಲಕ್ಷ ವಾರ್ಷಿಕ ಲಾಭ : ಶೇ.5.5 ಡಿವಿಡೆಂಡ್ ವಿತರಣೆ

ಮಂಡೆಕೋಲು ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತುರವರ ಅಧ್ಯಕ್ಷತೆಯಲ್ಲಿ ಸೆ.1೦ರಂದು ಸಂಘದ ಸಭಾಭವನದಲ್ಲಿ ನಡೆಯಿತು.
ಸಂಘದ ಉಪಾಧ್ಯಕ್ಷೆ ಶ್ರೀಮತಿ ಜಲಜಾ ದೇವರಗುಂಡ, ನಿರ್ದೇಶಕರುಗಳಾದ ಈಶ್ವರಚಂದ್ರ ಕೆ.ಆರ್., ಪದ್ಮನಾಭ ಚೌಟಾಜೆ, ಭಾಸ್ಕರ ಮಿತ್ತಪೇರಾಲು, ಸುನಿಲ್ ಪಾತಿಕಲ್ಲು, ಚಂದ್ರಜಿತ್ ಮಾವಂಜಿ, ಸುರೇಶ್ ಕಣೆಮರಡ್ಕ, ಮೋನಪ್ಪ ನಾಯ್ಕ ಬೇಂಗತ್ತಮಲೆ, ಶ್ರೀಮತಿ ಭಾರತಿ ಉಗ್ರಾಣಿಮನೆ, ಶ್ರೀಮತಿ ಸರಸ್ವತಿ ಕಣೆಮರಡ್ಕ, ರವಿ ಚೇರದಮೂಲೆ, ಬ್ಯಾಂಕ್ ಪ್ರತಿನಿಧಿ ಬಾಲಕೃಷ್ಣ ಪುತ್ಯ, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತಕೃಷ್ಣ ಚಾಕೋಟೆ ವೇದಿಕೆಯಲ್ಲಿದ್ದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ರೈ ಮಾತನಾಡಿ, ವರದಿ ಸಾಲಿನಲ್ಲಿ ಸಂಘವು 138 ಕೋಟಿ ವಾರ್ಷಿಕ ವ್ಯವಹಾರ ನಡೆಸಿದ್ದು, 29 ಲಕ್ಷದ 25 ಸಾವಿರ ಲಾಭ ಗಳಿಸಿದೆ. ಸದಸ್ಯರಿಗೆ ಶೆ.5.5 ಡಿವಿಡೆಂಡ್ ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಂಗದ ನೇತೃತ್ವದಲ್ಲಿ ಮುರೂರು – ದೇವರಗುಂಡ ಭಾಗದಲ್ಲಿ ಪೆಟ್ರೋಲ್ ಪಂಪು ಆರಂಭಿಸಲು ನಿರ್ಧರಿಸಲಾಗಿದ್ದು, ಅಡಿಕೆ ಮರ ಹತ್ತುವವರಿಗೆ, ಮದ್ದು ಬಿಡುವವರಿಗೆ, ಇತರೇ ಮರ ಹತ್ತುವವರಿಗೆ ಸಂಘದ ವತಿಯಿಂದ ಇನ್ಸೂರೆನ್ಸ್ ಮಾಡಲಾಗುವುದು. ಸದಸ್ಯರ ಸಾಲದ ಮೇಲೆ ಭದ್ರತೆಗಾಗಿ ಇನ್ಸೂರೆನ್ಸ್ ಮಾಡುವುದು, ಸಂಘದ ಸದಸ್ಯರ ಅನುಕೂಲಕ್ಕಾಗಿ ಕೃಷಿ ಮಾಹಿತಿ ಕಾರ್ಯಾಗಾರ ನಡೆಸಲಾಗುವುದು. ಶವ ಸಂಸ್ಕಾರ ಪೆಟ್ಟಿಗೆ ಖರೀದಿಸಿ ಸಾರ್ವಜನಿಕ ಸೇವೆಗೆ ನೀಡಲಾಗುವುದು ಎಂದು ಅವರು ಹೇಳಿದರು.
ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಉದಯಕುಮಾರ್ ಜಿ. ಲೆಕ್ಕಪತ್ರ ಮಂಡಿಸಿದರು.
ಮಂಡೆಕೋಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸದಾನಂದ ಮಾವಜಿ, ಮಂಡೆಕೋಲು ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಮಂಡೆಕೋಲು ಗ್ರಾ.ಪಂ. ಸದಸ್ಯ ಬಾಲಚಂದ್ರ ದೇವರಗುಂಡ, ನವೀನ್ ಮಂಡೆಕೋಲು, ಸುಬ್ರಹ್ಮಣ್ಯ ಭಟ್, ಉತ್ತಪ್ಪ ಎಂ.ಸಿ. ಮಾತನಾಡಿದರು.
ಸಂಘದ ಸದಸ್ಯರಾಗಿದ್ದು ನಿಧನರಾದವರ ೧೧ ಕುಟುಂಬಕ್ಕೆ ತಲಾ ೫ ಸಾವಿರದಂತೆ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ನೀಡಲಾಯಿತು.

ನಿರ್ದೇಶಕ ಸುರೇಶ್ ಕಣೆಮರಡ್ಕ ಸ್ವಾಗತಿಸಿದರು. ನಿರ್ದೇಶಕಿ ಭಾರತಿ ಉಗ್ರಾಣಿಮನೆ ವಂದಿಸಿದರು. ಸಿಬ್ಬಂದಿ ಶ್ರೀಕಾಂತ್ ಮಾವಂಜಿ ಕಾರ್ಯಕ್ರಮ ನಿರೂಪಿಸಿದರು.