ದ. ಕ. ಜಿಲ್ಲಾ ಮಟ್ಟದ ತನಿಖಾಧಿಕಾರಿಗಳಿಗೆ ತನಿಖೆ ಮತ್ತು ಅಧಿಕಾರಿ ಸಾಕ್ಷ್ಯಗಳ ಮಹತ್ವ ಕುರಿತು ಮಾಹಿತಿ ಕಾರ್ಯಗಾರ ಮತ್ತು ಗೌರವಾರ್ಪಣೆ

0

ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ, ಸಮಾನ ರೀತಿಯಲ್ಲಿ ಪ್ರವರ್ತಿಸುವ ಕಾರಣದಿಂದ ಸದೃಢ ಸಮಾಜವನ್ನು ನಿರ್ಮಿಸಲು ಸಾಧ್ಯ ಆಗುತ್ತಿದೆ : ರವೀಂದ್ರ ಎಂ. ಜೋಶಿ

 

ಸದೃಢ ಸಮಾಜ ನಿರ್ಮಾಣವಾಗಲು ನ್ಯಾಯಾಂಗ ಶಾಸಕಾಂಗ ಕಾರ್ಯಾಂಗ ಸಮಾನ ರೀತಿಯಲ್ಲಿ ಕಾರ್ಯಚರಿಸುತ್ತಿರುವ ಕಾರಣದಿಂದಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಧೀಶರು ರವೀಂದ್ರ ಎಂ ಜೋಶಿ ಹೇಳಿದರು.

ಅವರು ಇಂದು ಸುಳ್ಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ , ಅಭಿಯೋಜನಾ ಇಲಾಖೆ ಮಂಗಳೂರು ವಲಯದ ದ ಕ, ಪೊಲೀಸ್ ಉಪಾಧೀಕ್ಷಕರ ಕಛೇರಿ ಪುತ್ತೂರು, ಸಹಾಯಕ ಸರ್ಕಾರಿ ಅಭಿಯೋಜಕರ ಕಚೇರಿ ಸುಳ್ಯ, ಪೊಲೀಸ್ ಇಲಾಖೆ ಸುಳ್ಯ ಇದರ ಸಂಯುಕ್ತ ಆಶಯದಲ್ಲಿ ತನಿಖೆ ಮತ್ತು ಅಧಿಕಾರಿ ಸಾಕ್ಷ್ಯ ಗಳ ಮಹತ್ವ ಎಂಬ ವಿಷಯದ ಕುರಿತು ದ ಕ ಜಿಲ್ಲಾ ಮಟ್ಟದ ತನಿಖಾ ಧಿಕಾರಿಗಳಿಗೆ ತನಿಖೆಯ ವಿವಿಧ ಹಂತಗಳ ಕುರಿತು ಮಾಹಿತಿ ಕಾರ್ಯಗಾರ ಮತ್ತು ಗೌರವಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಈ ಮಾಹಿತಿ ಕಾರ್ಯಗಳು ಅಂಬಟಡ್ಕ ಕೆವಿಜಿ ಆಯುರ್ವೇದ ಫಾರ್ಮ ಮತ್ತು ರಿಸರ್ಚ್ ಸೆಂಟರ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಎಂ ಜೋಶಿ ನೆರವೇರಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಾವಣೆ ಋಷಿಕೇಶ್ ಭಗವಾನ್ ವಹಿಸಿದ್ದರು.
ವೇದಿಕೆಯಲ್ಲಿ ಗೌರವ ಉಪಸ್ಥಿತರಾಗಿ ಬೆಂಗಳೂರು ಲಘು ವ್ಯವಹಾರಗಳ ನ್ಯಾಯಾಲಯ ಮತ್ತು ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಸೋಮಶೇಖರ ಎ, ಸುಳ್ಯ ಸಿ ಜೆ,ಜೆ ಎಂ ಎಫ್ ಸಿ ಸಿವಿಲ್ ನ್ಯಾಯಾಧೀಶೆ ಅರ್ಪಿತಾ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಸುಳ್ಯ ತಹಶೀಲ್ದಾರ್ ಕು. ಅನಿತಾ ಲಕ್ಷ್ಮಿ,ಪುತ್ತೂರು ಡಿ ವೈ ಎಸ್ ಪಿ ವೀರಯ್ಯ ಹಿರೇ ಮಠ, ಡಿ ಸಿ ಆರ್ ಬಿ ವಿಭಾಗದ ಡಿವೈಎಸ್ಪಿ ಡಾ. ಪಿ.ಗಾನ ಕುಮಾರ್, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪುತ್ತೂರು ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರು ಪುಷ್ಪರಾಜ್ ಅಂಡ್ಯಂತಾಯ ಸಂಪನ್ಮೂಲ ವ್ಯಕ್ತಿಯಾಗಿ ಅಪರಾಧಿಕ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸುವ ವಿಧಾನ, ತನಿಖೆ ದೋಷರೋಪಣ ಪತ್ರ ವಿಷಯದ ಕುರಿತು ಮಾಹಿತಿ ಕಾರ್ಯಗಾರ ನಡೆಸಿದರು.

 

ಅಪರಾಧಿಕ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿನ ಮೌಕಿಕ ಸಾಕ್ಷ್ಯದ ಮಹತ್ವ ಸಿ ಆರ್ ಪಿ 164 ಮತ್ತು ವಿಷಯ ತಜ್ಞರ ಸಾಕ್ಷ್ಯದ ಮಹತ್ವ ಹಾಗೂ ಅಬಕಾರಿ ತಕ್ಷೇರಿಗೆ ಸಂಬಂಧಿಸಿದಂತೆ ಎಫ್ ಐ ಆರ್ ತನಿಖೆ ಮತ್ತು ದೋಷಾರೋಪಣ ಪತ್ರ ಸಲ್ಲಿಕೆ, ಇನ್ವೆಂಟರಿ ವರದಿ ಬಗ್ಗೆ ಬೆಂಗಳೂರು ಲಘು ವ್ಯವಹಾರಗಳ ನ್ಯಾಯಾಲಯದ ನ್ಯಾಯಾಧೀಶ ಸೋಮಶೇಖರ್ ಎ ಮಾಹಿತಿ ಕಾರ್ಯಗಾರ ನಡೆಸಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಈ ಕಾರ್ಯಕ್ರಮದ ನೇತೃತ್ವವನ್ನು ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಮತ್ತು ಸುಳ್ಯ ನ್ಯಾಯಾಲಯದ ಎಪಿಪಿ ಜನಾರ್ಧನ್ ವಹಿಸಿ ಕಾರ್ಯಕ್ರಮವನ್ನು ನಿರೂಪಿಸಿ ಸಹಕರಿಸಿದರು.ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ವೃತ ನಿರೀಕ್ಷಕರುಗಳು, ಪೊಲೀಸ್ ಠಾಣಾ ನಿರೀಕ್ಷಕರು, ಅರಣ್ಯ ಇಲಾಖೆಯ ಅಧಿಕಾರಿಗಳು, ಗ್ರಹ ರಕ್ಷಕ ದಳದ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ಸುಳ್ಯ ವಕೀಲರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದ್ದರು.