ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಉದ್ಯಮಿ ಹರೀಶ್ ರಾವ್ ಉದ್ದಂಪಾಡಿಯವರಿಂದ ಧ್ವನಿವರ್ಧಕ ಕೊಡುಗೆ

0
200

 

 

ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಐವರ್ನಾಡಿನ ಹರೀಶ್ ರಾವ್ ಉದ್ದಂಪಾಡಿಯವರು ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಹೊಸ ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಿದರು.

ದಿ.ಶಿವರಾಮ ರಾವ್ ಮತ್ತು ದಿ.ಜಯಲಕ್ಷ್ಮೀ ಯು. ಇವರ ಸ್ಮರಣಾರ್ಥ ಸಂಸ್ಥೆಗೆ ಕೊಡುಗೆಯನ್ನು ನೀಡಿದ್ದು ಸೆ.,09 ರಂದು ನಡೆದ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಧ್ವನಿವರ್ಧಕದ ಉದ್ಘಾಟನೆ ನಡೆಯಿತು.
ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಉದ್ಘಾಟಿಸಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here