ಬಿಜೆಪಿ‌ ಹಿಂದುಳಿದ ವರ್ಗದಿಂದ ನಾರಾಯಣ ಗುರು ಜಯಂತಿ ಆಚರಣೆ

0

 

 

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸುಳ್ಯ ಮಂಡಲ ಇದರ ವತಿಯಿಂದ ಸೆ.10ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಕಾರ್ಯಕ್ರಮವನ್ನು ಪಕ್ಷದ ಕಚೇರಿಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಚಂದ್ರಶೇಖರ್ ಪನ್ನೆ ವಹಿಸಿದ್ದರು. ವೇದಿಕೆಯಲ್ಲಿ ಸುಳ್ಯ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ಹಾಗು ಒಬಿಸಿ ಮೋರ್ಚಾ ಸುಳ್ಯ ಮಂಡಲ ಇದರ ನಿಕಟಪೂರ್ವ ಅಧ್ಯಕ್ಷರಾದ ಸೋಮನಾಥ್ ಪೂಜಾರಿ ಉಪಸ್ಥಿತರಿದ್ದರು .

ಕಾರ್ಯಕ್ರಮದಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶಶಿಕಲಾ ದುಗಲಡ್ಕ ,ಪೂಜಿತಾ ಕೆ ಯು, ಶಿಲ್ಪಾ ಸುದೇವ್ ,ಪ್ರವಿತಾ ಪ್ರಶಾಂತ್ ಮತ್ತು ಒಬಿಸಿ ಮೋರ್ಚಾ ಸುಳ್ಯ ಮಂಡಲ ಇದರ ಪದಾಧಿಕಾರಿಗಳು ಸರ್ವ ಸದಸ್ಯರು ಪಾಲ್ಗೊಂಡರು. ಒಬಿಸಿ ಮೋರ್ಚಾ ಸುಳ್ಯ ಮಂಡಲ ಇದರ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಕೇರ್ಪಳ ಸ್ವಾಗತಿಸಿ, ನವೀನ್ ಸಾರಕೆರೆ ವಂದಿಸಿದರು.