ಸೆ.14 : ಡಾ.ಪ್ರಭಾಕರ ಶಿಶಿಲರ ಅಲಿಮಾಳ ಆಡು ಕೃತಿ ಬಿಡುಗಡೆ

0

ಜೇಸಿಐ ಪಂಜ ಪಂಚಶ್ರೀ ಇದರ ಬೆಳ್ಳಿ ಹಬ್ಬದ ಅಂಗವಾಗಿ ಸೆ.14 ರಂದು ನಿಂತಿಕಲ್ಲು ಕೆ.ಎಸ್.ಗೌಡ ವಿದ್ಯಾ ಸಂಸ್ಥೆಯಲ್ಲಿ ಡಾ.ಪ್ರಭಾಕರ ಶಿಶಿಲರ ಹತ್ತು ಕತೆಗಳ ಸಂಕಲನ ಅಲೀಮಾಳ ಆಡು ಬಿಡುಗಡೆಯಾಗಲಿದೆ.

ವಿದ್ಯಾಸಂಸ್ಥೆಯ ನಿರ್ದೇಶಕ ಕುಮಾರಸ್ವಾಮಿಯವರು ಕೃತಿ ಬಿಡುಗಡೆ ಮಾಡಲಿದ್ದು, ವಿಮರ್ಶಕ ಜೇಸಿ ಶಶಿಧರ ಪಳಂಗಾಯ ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ಜೇಸಿಐ ಅಧ್ಯಕ್ಷ ಜೇಸೀ ಶಿವಪ್ರಸಾದ ಹಾಲೆಮಜಲು ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಕನ್ನಡದ ಮಹತ್ವದ ಕಾದಂಬರಿಕಾರ ಡಾ. ಶಿಶಿಲರ ಎಳನೆಯ ಕಥಾಸಂಕಲನ ಇದಾಗಿದ್ದು, ಬಿಡುಗಡೆ ದಿವಸ ರಿಯಾಯಿತಿ ದರದಲ್ಲಿ ದೊರೆಯಲಿದೆ. ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಪಂಜ ಪಂಚಶ್ರೀ ಜೇಸೀಸ್‌ನ ಸ್ಥಾಪಕಾಧ್ಯಕ್ಷ ಜೇಸಿ ದೇವಿಪ್ರಸಾದ್ ಜಾಕೆ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.