ಮರಕತ : ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ಉದ್ಘಾಟನೆ

0
143

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ ಇಲ್ಲಿ ಸೆ.9 ರಂದು ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ಮರಕತ_ ನಡುಗಲ್ಲು ಇದರ ಉದ್ಘಾಟನೆ ನಡೆಯಿತು. ಶ್ರೀ ದುರ್ಗಾ ಭಜನಾ ಮಂಡಳಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಪಾಲ್ತಾಡು ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

p>

ಬಳಿಕ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಅಧ್ಯಕ್ಷ, ಕಾರ್ಯದರ್ಶಿ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶ್ರೀಮತಿ ಲೀಲಾವತಿ ಅಂಜೇರಿ ಕಾರ್ಯದರ್ಶಿಯಾಗಿ ಶ್ರೀಮತಿ ಧನ್ಯ ಉತ್ರಂಬೆ, ಖಜಾಂಜಿಯಾಗಿ ಶ್ರೀಮತಿ ಚಂದ್ರಾವತಿ ಉತ್ರಂಬೆ ಇವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಮಹಿಳಾ ಭಜನಾ ಮಂಡಳಿಯ ಸದಸ್ಯರು, ಮರಕತ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಮಾವಿನಕಟ್ಟೆ, ದಯಾನಂದ ಹುದೇರಿ, ಪ್ರಶಾಂತ ಅಂಬೇಕಲ್ಲು, ಹರೀಶ್ ಅಂಜೇರಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here