ಸೆ.30 :  ಗುತ್ತಿಗಾರಿನ ಮುತ್ಲಾಜೆ – ಚಣಿಲದಲ್ಲಿ ದುರ್ಗಾಪೂಜೆ ಪ್ರಯುಕ್ತ ಹಗ್ಗಜಗ್ಗಾಟ ಸ್ಪರ್ಧೆ

0

ಗುತ್ತಿಗಾರಿನ ಶ್ರೀ ಶೂಲಿನಿ ದುರ್ಗಾದೇವಿ ಮತ್ತು ಶಾಸ್ತಾವು ಕ್ಷೇತ್ರ ಮುತ್ಲಾಜೆ – ಚಣಿಲ ಇಲ್ಲಿ ಕ್ಷೇತ್ರದ ಅಭಿವೃದ್ಧಿ ಸಮಿತಿ ವತಿಯಿಂದ ದುರ್ಗಾಪೂಜೆ ಪ್ರಯುಕ್ತ ಸಾರ್ವಜನಿಕರ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಪುರುಷರ ಸ್ಪರ್ಧೆಗೆ ರೂ.  10001, ರೂ. 6001 ಹಾಗೂ ಮಹಿಳೆಯರ ಸ್ಪರ್ಧೆಗೆ ರೂ. 6001, ರೂ. 4001 ಬಹುಮಾನ ಇರಲಿದೆ. ತಂಡದ ಪ್ರವೇಶ ಶುಲ್ಕ ರೂ.500 ತಂಡದ ಇರಲಿದೆ. ಪುರುಷರ ಮತ್ತು ಮಹಿಳೆಯರ ತಂಡವು 8 ಜನರ ತಂಡವಾಗಿರಬೇಕು. ಪುರುಷರ ತಂಡವು ಒಟ್ಟು ಭಾರ 525 ಕೆ.ಜಿ ಮೀರಿರಬಾರದು. ಮಹಿಳೆಯರ ತಂಡಕ್ಕೆ ಭಾರದ ಮಿತಿ ಇರುವುದಿಲ್ಲ. ಇದಲ್ಲದೆ ಮಕ್ಕಳು, ಸಾರ್ವಜನಿಕ ಪುರುಷರು, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮಾಹಿತಿಗಾಗಿ ಶ್ರೇಯಸ್ ಮುತ್ಲಾಜೆ (9482499577) ಮತ್ತು ಭರತ್ ಹುಲಿಕೆರೆ (9480253557)ಅವರುಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here