ಜೇಸಿಐ ಸುಳ್ಯ ಪಯಸ್ವಿನಿಯ ಜೇಸಿಐ ಸಪ್ತಾಹ ನಾಯಕತ್ವ ಮತ್ತು ಹದಿಹರೆಯದ ಮಕ್ಕಳ ಸಮಸ್ಯೆಗಳು -ಪರಿಹಾರ ಮಾಹಿತಿ ಕಾರ್ಯಾಗಾರ

0
74

 

ಜೇಸಿಐ ಸುಳ್ಯ ಪಯಸ್ವಿನಿಯ ಜೇಸಿಐ ಸಪ್ತಾಹ, ನಮಸ್ತೆ ಇದರ ಅಂಗವಾಗಿ ಬಿ. ಸಿ. ಯಂ ಹಾಸ್ಟೆಲ್, ಕುರುಂಜಿಭಾಗ್ ಸುಳ್ಯ ಇಲ್ಲಿನ ವಿಧ್ಯಾರ್ಥಿನಿಯರಿಗಾಗಿ ಸೆ. 11 ರಂದು ‘ನಾಯಕತ್ವ & ಹದಿಹರೆಯದ ಮಕ್ಕಳ ಸಮಸ್ಯೆ ಗಳು ಹಾಗೂ ಪರಿಹಾರದ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.


ಮೇಲಿನ ಜಂಟಿ ತರಬೇತಿಯನ್ನು ಜೇಸಿಐ ವಲಯ 15 ರ ವಲಯ ತರಬೇತುದಾರರಾದ ಜೇಸಿ ಪ್ರದೀಪ್ ಬಾಕಿಲ ಮತ್ತು ಜೇಸಿ ಹೇಮಲತಾ ಪ್ರದೀಪ್ ಬಾಕಿಲ ರವರು ವಿಧ್ಯಾರ್ಥಿನಿಯರಿಗಾಗಿ ನೀಡಿರುತ್ತಾರೆ.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷರಾದ ಜೇಸಿ ರಂಜಿತ್ ಕುಕ್ಕೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕರು, ಜೇಸಿ ರಾಜ್ಯ ತರಬೇತುದಾರರಾದ ಜೇಸಿ ಕೆ. ಆರ್ ಗಂಗಾಧರ ರವರು ವಿಧ್ಯಾರ್ಥಿನಿಯರನ್ನು ಉದ್ದೇಶಿಸಿ ಶುಭಾಹಾರೈಸಿದರು.
ವೇದಿಕೆಯಲ್ಲಿ ಸೀನಿಯರ್ ಮೆಂಬರ್ ಅಸೋಸಿಯೇಷನ್ ಇದರ ವಲಯ ಉಪಾಧ್ಯಕ್ಷರಾದ ಜೇಸಿ ಪ್ರಶಾಂತ್ ಕುಮಾರ್ ರೈ, ಹಾಸ್ಟೆಲ್ ಸೂಪರ್ಡೆಂಟ್ ಶ್ರೀ ಮತೀ ಗೀತಾ ಎಸ್. ಕೆ, ಸಪ್ತಾಹ ನಿರ್ದೇಶಕಿ ಜೇಸಿ ಶೋಭಾ ಅಶೋಕ್ ಚೂಂತರ್, ಯೋಜನಾ ನಿರ್ದೇಶಕಿ ಜೇಸಿ ಲತಾಶ್ರೀಸುಪ್ರೀತ್ ಮೋಂಟಡ್ಕ, ಜೇಸಿ ತಾರಾ ಮಾದವ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಜೇಸಿಐ ಸುಳ್ಯ ಪಯಸ್ವಿನಿಯ ಕಾರ್ಯದರ್ಶಿ ಜೇಸಿ ನವೀನ್ ಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here