ವಳಲಂಬೆಯ ಯುವಕ ಬೋವಿಕಾನದಲ್ಲಿ ಆತ್ಮಹತ್ಯೆ

0

 

 

ಗುತ್ತಿಗಾರು ಗ್ರಾಮದ ವಳಲಂಬೆ ನಿವಾಸಿ ಜೈಸನ್ ಎಂಬ ಯುವಕ ಸೆ.11 ರಂದು ಬೋವಿಕಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಅವರಿಗೆ 32 ವರ್ಷ ವಯಸ್ಸಾಗಿತ್ತು. ಭೋವಿಕಾನದಲ್ಲಿ ರಬ್ಬರ್ ಲೀಸ್ ಗೆ ಪಡೆದು ಅದನ್ನು ನೋಡಿಕೊಳ್ಳುತಿದ್ದರೆನ್ನಲಾಗಿದೆ. ಅಲ್ಲೇ ದಂಪತಿ ಸಮೇತ ವಾಸಿಸುತಿದ್ದು ತಂದೆ ತಾಯಿ ವಳಲಂಬೆಯಲ್ಲಿದ್ದಾರೆ. ಮೃತರ ದೇಹವನ್ನು ವಳಲಂಬೆ ತರಲಾಗುತ್ತಿದ್ದು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಮೃತರು ತಂದೆ ಥೋಮಸ್, ತಾಯಿ ಲೀಲಮ್ಮ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here