ಅರಂತೋಡು – ತೊಡಿಕಾನ ಸೊಸೈಟಿಯ ವಾರ್ಷಿಕ ಮಹಾಸಭೆ

0

ಶೇ.7 ಡಿವಿಡೆಂಡ್ ಘೋಷಣೆ

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ 2021- 22 ನೇ ಸಾಲಿನ 103 ನೇ ಮಹಾಸಭೆಯು ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರ ಅಧ್ಯಕ್ಷತೆಯಲ್ಲಿ ಸಿರಿಸೌಧ ಸಭಾಂಗಣದಲ್ಲಿ ಜರುಗಿತು. ಭಾರತ ಮಾತೆಯ ಭಾವಚಿತ್ರದ ಬಳಿ ಸಂಘದ ಹಿರಿಯ ನಿರ್ದೇಶಕರಾದ ಚಂದ್ರಶೇಖರ ಚೋಡಿಪಣೆಯವರು ದೀಪ ಪ್ರಜ್ವಲನೆಯನ್ನು ಮಾಡಿದರು. ಸಂಘದ ಎಲ್ಲಾ ನಿರ್ದೇಶಕರು ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ನಡೆಸುವುದರೊಂದಿಗೆ ಮಹಾಸಭೆಯನ್ನು ಆರಂಭಿಸಲಾಯಿತು.

ಸಂಘದ ಸದಸ್ಯ ದಿನೇಶ್ ದೇರಾಜೆಯವರು ಪ್ರಾರ್ಥನೆ ನೆರವೇರಿಸಿದರು. ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ೨೦೨೧-೨೨ನೇ ಸಾಲಿನ ಮಹಾಸಭೆಗೆ ಆಗಮಿಸಿದ ಸಂಘದ ಸರ್ವ ಸದಸ್ಯರನ್ನು ಸ್ವಾಗತಿಸಿದರು. ವರದಿ ವರ್ಷದಲ್ಲಿ ಮೃತಪಟ್ಟ ಸದಸ್ಯರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ವಾಸುದೇವ ನಾಯಕ್‌ರವರು ೨೦೨೧-೨೨ ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿ, ಆರ್ಥಿಕ ವರ್ಷಾಂತ್ಯಕ್ಕೆ 2303  ಸದಸ್ಯರಿದ್ದು ರೂ. 23.96 ಕೋಟಿ ಠೇವಣಿ ಹೊಂದಿದ್ದು, ರೂ 26.79 ಕೋಟಿ ಸಾಲ ಹೊರ ಬಾಕಿಯಿರುತ್ತದೆ. 198  ಕೋಟಿ ವ್ಯವಹಾರ ಮಾಡಿ, 47 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ರೂ. 28.15  ಲಕ್ಷ ಲಾಭದೊಂದಿಗೆ ಮುನ್ನಡೆದಿದೆ ಎಂದರು. ನಂತರ ಅನುಪಾಲನಾ ವರದಿ, ಬಜೆಟ್ಷ್‌ಗಿಂತ ಹೆಚ್ಚಿಗೆಖರ್ಚಾಗಿರುವುದನ್ನು, ೨೦೨೨-೨೩ನೇ ಸಾಲಿನ ಆಯ-ವ್ಯಯ ಪಟ್ಟಿಯನ್ನು, ೨೦೨೨-೨೩ನೇ ಸಾಲಿನ ಕಾರ್ಯಚಟುವಟಿಕೆ, ಉಪವಿಧಿಗಳ ತಿದ್ದುಪಡಿಗಳನ್ನು ಮಹಾಸಭೆಯಲ್ಲಿ ಮಂಡಿಸಿ ಅನುಮೋದನೆ ಪಡಕೊಳ್ಳಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ನಿರ್ದೇಶಕರಾದ ವಿನೋದ್‌ಕುಮಾರ್ ಉಳುವಾರು, ಚಂದ್ರಶೇಖರಚೋಡಿಪಣೆ, ಕುಸುಮಾಧರ ಅಡ್ಕಬಳೆ, ನಿಧೀಶ್‌ಅರಂತೋಡು, ಸಂತೋಷ್ ಚಿಟ್ಟನ್ನೂರು, ಭಾರತಿ ಪಿಂಡಿಮನೆ, ಚಿತ್ರಾದೇರಾಜೆ, ಸೋಮಯ್ಯ ಹೆಚ್.,ಗಣೇಶ್ ಕರಿಂಬಿ, ವಿಜೇತ್ ಮರುವಳ ಮತ್ತು ಕೇಶವ ಅಡ್ತಲೆ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಕುಸುಮಾಧರ ಅಡ್ಕಬಳೆಯವರು ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ನಿರೂಪಿಸಿದರು.