ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷೆಯಾಗಿ ಸಂಧ್ಯಾ ಸಚಿತ್ ಕುಮಾರ್

0

 

 

ಲಯನ್ಸ್ ಜಿಲ್ಲೆ 317ಡಿ ಪ್ರಾಂತ್ಯ 8ರ ಪ್ರಾಂತೀಯ ಅಧ್ಯಕ್ಷರಾಗಿ ಲ|ಸಂಧ್ಯಾ ಸಚಿತ್ ಕುಮಾರ್ ಆಯ್ಕೆಯಾಗಿದ್ದಾರೆ.


ಏಪ್ರಿಲ್ 11ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆದ 14ನೇ ಜಿಲ್ಲಾ ಕನ್ವೆನ್ಸನ್ ನಲ್ಲಿ ಲಯನ್ಸ್ ಜಿಲ್ಲೆ 317ಡಿಯ 2022-23ರ ನೂತನ ರಾಜ್ಯಪಾಲರಾದ ಸಂಚಿತ್ ಶೆಟ್ಟಿರವರು ಲ|ಸಂದ್ಯಾ ಸಚಿತ್ ಕುಮಾರ್ ರವರನ್ನು ಪ್ರಾಂತ್ಯ 8ರ ಅಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ. ಸಂದ್ಯಾರವರು ಚೆಂಬು ಬಾಲಂಬಿ ಫಾರ್ಮ್ಸ್ ನ ಸಚಿತ್ ಕುಮಾರ್ ರವರ ಪತ್ನಿಯಾಗಿದ್ದು, ಪ್ರಸ್ತುತ ಕಡಬದ ಕೊಡಿಂಬಾಳದಲ್ಲಿ ಕುಟುಂಬ ಸಮೇತ ನೆಲೆಸಿರುತ್ತಾರೆ. ಸಂಪಾಜೆ ಲಯನ್ಸ್ ಕ್ಲಬಿನ ಸದಸ್ಯರಾಗಿದ್ದು, ಕ್ಲಬ್‌ನಲ್ಲಿ ಬೇರೆ ಬೇರೆ ಹುದ್ದೆಯನ್ನು ಅಲಂಕರಿಸಿದ್ದಾರೆ. 2020-21ರಲ್ಲಿ ಲಯನ್ಸ್ ಜಿಲ್ಲೆ 317ರ ವಲಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

LEAVE A REPLY

Please enter your comment!
Please enter your name here