ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆ ಯಲ್ಲಿ ಆತ್ಮಹತ್ಯಾ ನಿರ್ಮೂಲನಾ ದಿನಾಚರಣೆ

0

 

ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಆತ್ಮಹತ್ಯೆ ನಿರ್ಮೂಲನಾ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ದೇವಚಳ್ಳ ಸಮುದಾಯ ಆರೋಗ್ಯ ಅಧಿಕಾರಿ ಡಾ। ಮೋನಿಷಾ ಜಿ. ಎಸ್. ರವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು .

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು, ಯಾವುದೇ ನೋವುಗಳನ್ನು ಹೆತ್ತವರೊಡನೆ ಹಂಚಿಕೊಳ್ಳುವುದು, ಮಾರಣಾಂತಿಕ ಗೇಮ್ ಗಳನ್ನು ಆಡದೆ ಮೊಬೈಲನ್ನು ಹಿತಮಿತವಾಗಿ ಬಳಸಿ ವಿದ್ಯಾರ್ಥಿ ಜೀವನವನ್ನು ಗೆಲ್ಲುವುದು ಇತ್ಯಾದಿ ವೈಯುಕ್ತಿಕ ಮೌಲ್ಯಗಳನ್ನು ಅಭಿವೃದ್ಧಿಪಡಿಸಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಗದಾಧರ್ ಬಾಳುಗೋಡು, ಶಿಕ್ಷಕರಾದ ಪುನೀತ್, ಹೇಮಲತಾ, ಸಂಪತ್, ಪ್ರಶ್ವೀಜಾ ಹಾಗೂ 6 ರಿಂದ 10ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆ ನಿರ್ಮಲಾ ರವರು ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here