ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಐದನೇ ವರ್ಷದ ವಾರ್ಷಿಕ ಮಹಾಸಭೆ

0

 

33.51 ಲಕ್ಷ ಲಾಭ
ಶೇಕಡ 8 ಡಿವಿಡೆಂಟ್
ಶೇಕಡ ನೂರು ವಸೂಲಾತಿ ಸಾಧನೆ

ನಂ38189 ನೇ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಐದನೇ ವರ್ಷದ ವಾರ್ಷಿಕ ಮಹಾಸಭೆಯನ್ನು ದಿನಾಂಕ 11 ಸೆಪ್ಟೆಂಬರ್ 2022ರಂದು ಸಂಘದ ಅಧ್ಯಕ್ಷರಾದ  ನಾಗೇಶ್ ಕುಂದಲ್ಪಾಡಿಯವರ ಅಧ್ಯಕ್ಷತೆಯಲ್ಲಿ ಅನ್ನಪೂರ್ಣೇಶ್ವರಿಕಲಾ ಮಂದಿರ ಪರಾಜೆಯಲ್ಲಿ ನಡೆಯಿತು.

“ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಸಹಕಾರ ಕ್ಷೇತ್ರದ ಪ್ರಗತಿ ಸಾಧ್ಯವಾಗುತ್ತದೆ. ಸಹಕಾರ ಸಂಸ್ಥೆಯು ಸಾಮಾಜಿಕ ಬದ್ಧತೆ, ಶುದ್ಧತೆ, ಆಧುನಿಕತೆ, ತಾಂತ್ರಿಕತೆ ಇವುಗಳನ್ನು ಅಳವಡಿಸಿಕೊಳ್ಳಬೇಕಿದೆ. ಖಾಸಗಿ ಕ್ಷೇತ್ರದ ಸ್ಪರ್ಧೆಯನ್ನು ಎದುರಿಸಿಕೊಂಡು ಸರ್ಕಾರದ ನೀತಿ ನಿಯಮಗಳ ಚೌಕಟ್ಟಿನೊಳಗೆ ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರ ಚಳುವಳಿಯ ಆಳ ಅಗಲ ವ್ಯಾಪಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಕೇಂದ್ರ ಸರ್ಕಾರವು ಸಹಕಾರ ಸಚಿವಾಲಯ ಸ್ಥಾಪಿಸಿರುವುದು ಸಹಕಾರದ ಬೆಳವಣಿಗೆ ಪೂರಕವಾಗಿದೆ” ಎಂದು ಮಾತನಾಡುತ್ತಾ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಗೆ ಕಾರಣಕರ್ತರು ಹಾಗೂ ಶೇ100 ವಸೂಲಾತಿಗೆ ಸಹಕರಿಸಿದ ಸರ್ವ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಸೂಚಿಯಂತೆ ಸಭೆ ನಡೆಯಿತು.

ಯತೀಶ್ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ ಎಚ್ ಕೆ ಸರ್ವರನ್ನು ಸ್ವಾಗತಿಸಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ಅಶೋಕ ಪಿ.ಎಂ ನಿರ್ದೇಶಕರುಗಳಾದ ಮೋನಪ್ಪ ಎನ್.ಬಿ, ಪ್ರಸನ್ನ ನೆಕ್ಕಿಲ,ದೀನರಾಜ ದೊಡ್ಡಡ್ಕ, ಪ್ರಮೀಳಾ ಎನ್ ಬಂಗಾರಕೋಡಿ, ದಾಸಪ್ಪ ಮಡಿವಾಳ, ಉದಯಕುಮಾರ ಪಿ.ಎ, ಶೇಷಪ್ಪ ಎನ್.ವಿ, ಜಯರಾಮ ಪಿ.ಟಿ, ಕಿರಣ ಬಂಗಾರಕೋಡಿ,ಆಂತರಿಕ ಲೆಕ್ಕಪರಿಶೋಧಕರಾದ ರತ್ನಾಕರ ಬಳ್ಳಡ್ಕ, ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ವಿಜಯ ಕೆ.ಎಸ್ ಉಪಸ್ಥಿತರಿದ್ದರು. ನಿರ್ದೇಶಕ ಪ್ರಸನ್ನ ಎನ್.ಬಿ ವಂದನಾರ್ಪಣೆಗೈದರು.